ಭಾನುವಾರ, ಡಿಸೆಂಬರ್ 8, 2019
24 °C
ಸಿದ್ದರಾಮಯ್ಯ ವಿರುದ್ಧ ಮುಂದುವರಿದ ಟ್ವಿಟರ್ ಸಮರ

ಹಿಂದೂಗಳನ್ನು ತುಳಿಯಲು ಸಿದ್ಧತೆ ನಡೆಯುತ್ತಿದೆ: ಯಡಿಯೂರಪ್ಪ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಂದೂಗಳನ್ನು ತುಳಿಯಲು ಸಿದ್ಧತೆ ನಡೆಯುತ್ತಿದೆ: ಯಡಿಯೂರಪ್ಪ‌

ಬೆಂಗಳೂರು: ‘ಮಠಗಳನ್ನು ಸುಪರ್ದಿಗೆ ತೆಗೆದುಕೊಂಡು ಹಿಂದೂಗಳನ್ನು ತುಳಿಯಲು ಸರ್ಕಾರ ಸಿದ್ಧತೆ ನಡೆಸಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಟ್ವಿಟರ್‌ನಲ್ಲಿ ಆರೋಪಿಸಿದ್ದಾರೆ.

‘ಸಿದ್ದರಾಮಯ್ಯ ಸರ್ಕಾರ ಮತ್ತೊಮ್ಮೆ ಹಿಂದೂಗಳನ್ನು ಕೆಣಕಲು ತಯಾರಾದಂತಿದೆ.‌ ಹಿಂದೂ ಮಠಗಳನ್ನು ಮಾತ್ರ ರ್ಧಾಮಿಕ ದತ್ತಿ ಕಾಯ್ದೆ ವ್ಯಾಪ್ತಿಗೆ ತರಲು ಹೊರಟಿದೆ. ಈ ಮೂಲಕ ಸಿದ್ದರಾಮಯ್ಯನವರ ಹಿಂದೂ ವಿರೋಧಿ ನೀತಿ ಮತ್ತೊಮ್ಮೆ ಜಗಜ್ಜಾಹಿರಾಗಿದೆ’ ಎಂದಿದ್ದಾರೆ.

‘ನಿಮ್ಮ ಸಮತೆಯ ಕರ್ನಾಟಕ ಎಂದರೆ ಇದೇನಾ’ ಎಂದು ಪ್ರಶ್ನಿಸಿರುವ ಯಡಿಯೂರಪ್ಪ, ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ ಸಾರ್ವಜನಿಕ ಪ್ರಕಟಣೆಯ ಪ್ರತಿಯನ್ನೂ ಪೋಸ್ಟ್‌ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)