ರಾಜ ವೈಭವ ನೆನಪಿಸಿದ ಅಕ್ಷರ ಜಾತ್ರೆ

7

ರಾಜ ವೈಭವ ನೆನಪಿಸಿದ ಅಕ್ಷರ ಜಾತ್ರೆ

Published:
Updated:

ಹಳೇಬೀಡು: ಇಲ್ಲಿ ಬುಧವಾರ ರಾಜವೈಭವ ಬುಧವಾರ ಮರುಕಳಿಸಿತ್ತು. ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮ ಮನೆಮಾಡಿತ್ತು. ಹೊಯ್ಸಳ ರಾಜರ ಅರಮನೆ ಆವರಣ ಎಂದು ಕರೆಯುವ ಸ್ಥಳ ಹಾಗೂ ಹೊಯ್ಸಳೇಶ್ವರ ದೇವಾಲಯದ ಸನಿಹದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣ ಸಾಹಿತ್ಯಾಸಕ್ತರಿಂದ ತುಂಬಿ ತುಳುಕುತ್ತಿತ್ತು. ಅಲಂಕೃತವಾದ ಬೃಹತ್‌ ವೇದಿಕೆಯಲ್ಲಿ ಕವಿ, ಸಾಹಿತಿಗಳು ವಿರಾಜಮಾನರಾಗಿ ಕಾರ್ಯಕ್ರಮ ನಡೆಸಿಕೊಟ್ಟರು.

ಪುಷ್ಪಗಿರಿಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಯಕರಳ್ಳಿ ಮಂಜೇಗೌಡ, ಸಮ್ಮೇಳನ ಅಧ್ಯಕ್ಷ ಟಿ.ಎಚ್‌.ಅಪ್ಪಾಜಿಗೌಡ ಹಾಗೂ ಪತ್ನಿ ಮಹಾದೇವಿ ಅವರನ್ನು ಅಲಂಕೃತ ಸಾರೋಟಿನಲ್ಲಿ ಮೆರವಣಿಗೆಯಲ್ಲಿ ಜನಪದ ಸಾಹಿತಿ ಮತಿಘಟ್ಟ ಕೃಷ್ಣಮೂರ್ತಿ ಮಹಾದ್ವಾರದ ಮುಖಾಂತರ ಮಹಾಕವಿ ಜನ್ನ ವೇದಿಕೆಗೆ ಕರೆತರಲಾಯಿತು.

ಹೊಯ್ಸಳೇಶ್ವರ ಮಹಾಮಂಟಪದ ಎದುರು ತಹಶೀಲ್ದಾರ್‌ ಎಚ್‌.ಎಸ್‌.ಪರಮೇಶ್‌ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರಳ್ಳಿ ಮಂಜೇಗೌಡ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.

ಕ.ಸಾ.ಪ ತಾಲ್ಲೂಕು ಘಟಕ ಅಧ್ಯಕ್ಷ ಎಚ್‌.ಎಂ.ದಯಾನಂದ್‌ ನಾಡಧ್ವಜಾರೋಹಣ ನೆರವೇರಿಸಿದರು. ಶಾಲಾ ಮಕ್ಕಳು ರಾಷ್ಟ್ರಗೀತೆ, ನಾಡಗೀತೆ ಹಾಡಿದರು. ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಬಿ.ವಿ.ಮಲ್ಲೇಶಪ್ಪ, ಉಪತಹಶೀಲ್ದಾರ್‌ ಕೆ.ಜಿ.ಪ್ರದೀಪ್‌, ಪಿಡಿಒ ಕೆ.ಹರೀಶ್‌, ಉಪಪ್ರಾಂಶುಪಾಲ ಮುಳ್ಳಯ್ಯ ಇದ್ದರು.

ಎಚ್‌.ಎಸ್‌.ಅನಿಲ್‌ ಕುಮಾರ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry