ಸೋಮವಾರ, ಡಿಸೆಂಬರ್ 9, 2019
21 °C

ಭ್ರಷ್ಟಾಚಾರ ಪ್ರಕರಣ: ಬಾಂಗ್ಲಾದ ಮಾಜಿ ಪ್ರಧಾನಿ ಖಲೀದಾ ಜಿಯಾಗೆ 5 ವರ್ಷ ಜೈಲು ಶಿಕ್ಷೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಭ್ರಷ್ಟಾಚಾರ ಪ್ರಕರಣ: ಬಾಂಗ್ಲಾದ ಮಾಜಿ ಪ್ರಧಾನಿ ಖಲೀದಾ ಜಿಯಾಗೆ 5 ವರ್ಷ ಜೈಲು ಶಿಕ್ಷೆ

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಮೇಲಿನ ಭ್ರಷ್ಟಾಚಾರ ಪ್ರಕರಣ­ಗಳಿಗೆ ಸಂಬಂಧಿಸಿ ಆರೋಪ ಸಾಬೀತಾಗಿದ್ದು, ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಗುರುವಾರ ಜಿಯಾ ಅವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿತು.

ಶಿಕ್ಷೆ ಪ್ರಕಟಗೊಂಡ ಬಳಿಕ ಕೋರ್ಟ್‌ ಅವರಣದಲ್ಲಿ ಖಲೀದಾ ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಐದು ಸಾವಿರ ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎರಡು ಬಾರಿ ಪ್ರಧಾನಿಯಾಗಿದ್ದ ಖಲೀದಾ ಜಿಯಾ ಅವರ ಆಡಳಿತಾವಧಿಯಲ್ಲಿ ಅವರ ವಿರುದ್ಧ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿದ್ದವು.

ಖಲೀದಾ ನೇತೃತ್ವದ ಬಾಂಗ್ಲಾದೇಶ ನ್ಯಾಷನಲ್‌ ಪಾರ್ಟಿ (ಬಿಎನ್‌ಪಿ)ಯನ್ನು ಚುನಾವಣೆಯಲ್ಲಿ ಸ್ಫರ್ಧಿಸದಂತೆ ಅಮಾನತು ಮಾಡಲಾಗಿತ್ತು.

ತಮ್ಮ ಮೇಲಿನ ಎರಡು ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಗೆ ಜಿಯಾ 50ಕ್ಕೂ ಹೆಚ್ಚು ಬಾರಿ ಹಾಜ­ರಾಗದಿರು­ವುದು ನ್ಯಾಯಾಲಯದ ಕೆಂಗಣ್ಣಿಗೂ ಕಾರಣ ವಾಗತ್ತು. ಭದ್ರತಾ ಕಾರಣದಿಂದಾಗಿ 72 ವರ್ಷದ ಜಿಯಾ ಅವರು, ನ್ಯಾಯಾ­ಲಯಕ್ಕೆ ಹಾಜರಾಗಲು ಸಾಧ್ಯ­ವಾಗು­ತ್ತಿಲ್ಲ. ಆದ್ದರಿಂದ ವಿಚಾರಣೆ ಮುಂದೂ­ಡು­ವಂತೆ ಜಿಯಾ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿದ್ದರು.

ಖಲೀದಾ ಅವರು ಅಧ್ಯಕ್ಷೆಯಾಗಿರುವ ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಷನಲ್‌ ಪಾರ್ಟಿ (ಬಿಎನ್‌ಪಿ) 2014ರ ಸಾರ್ವತ್ರಿಕ ಚುನಾವಣೆಯನ್ನು ಬಹಿಷ್ಕರಿಸಿದ ನಂತರ ಸಂಸತ್‌ನಲ್ಲಿ ಪ್ರಾತಿನಿಧ್ಯ ಕಳೆದುಕೊಂಡಿತ್ತು.

‘ಇದು ಸುಳ್ಳು ಆರೋಪ ಪ್ರಕರಣ. ಆದರೆ, ಕೋರ್ಟ್‌ ಆದೇಶವನ್ನು ನಾವು ಗೌರವಿಸುತ್ತೇವೆ’ ಎಂದು ಬಿಎನ್‌ಪಿ ಪಕ್ಷ ಪ್ರಧಾನ ಕಾರ್ಯದರ್ಶಿ ಫಕ್ರುಲ್ ಇಸ್ಲಾಮ್ ಅಲಮ್ಗಿರ್‌ ಹೇಳಿದ್ದಾರೆ.

ಇದನ್ನೂ ಓದಿ...

ಬಾಂಗ್ಲಾ: ಕೋರ್ಟ್‌ಗೆ ಶರಣಾಗಲು ಜಿಯಾ ನಿರ್ಧಾರ

ಬಾಂಗ್ಲಾ: ಖಲೀದಾ ಬಂಧನಕ್ಕೆ ವಾರಂಟ್‌

ಪ್ರತಿಕ್ರಿಯಿಸಿ (+)