ಸ್ಪೈಸ್​ಜೆಟ್ ವಿಮಾನದ ಟಯರ್‌ ಸ್ಫೋಟ: ತುರ್ತು ಭೂಸ್ಪರ್ಶ, 199 ಪ್ರಯಾಣಿಕರು ಸುರಕ್ಷಿತ

7

ಸ್ಪೈಸ್​ಜೆಟ್ ವಿಮಾನದ ಟಯರ್‌ ಸ್ಫೋಟ: ತುರ್ತು ಭೂಸ್ಪರ್ಶ, 199 ಪ್ರಯಾಣಿಕರು ಸುರಕ್ಷಿತ

Published:
Updated:
ಸ್ಪೈಸ್​ಜೆಟ್ ವಿಮಾನದ ಟಯರ್‌ ಸ್ಫೋಟ: ತುರ್ತು ಭೂಸ್ಪರ್ಶ, 199 ಪ್ರಯಾಣಿಕರು ಸುರಕ್ಷಿತ

ಚೆನ್ನೈ: ಚೆನ್ನೈನಿಂದ ದೆಹಲಿಗೆ ತೆರಳುತ್ತಿದ್ದ ಸ್ಪೈಸ್​ಜೆಟ್ ವಿಮಾನ ತಾಂತ್ರಿಕ ದೋಷದಿಂದಾಗಿ ಗುರುವಾರ ಮಧ್ಯಾಹ್ನ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಮಧ್ಯಾಹ್ನ 2.25ಕ್ಕೆ ಹಾರಟ ಆರಂಭಿಸುವ ವೇಳೆ ರನ್‌ ವೇಯಲ್ಲಿ ವಿಮಾನದ ಟಯರ್‌ ಸ್ಫೋಟಗೊಂಡಿದೆ ಮತ್ತು ಹೈಡ್ರಾಲಿಕ್‌ ಸಮಸ್ಯೆ ಎದುರಾಗಿದ್ದು, ತಾಂತ್ರಿಕ ತೊಂದರೆ ಕಾರಣ ವಿಮಾನ ತುರ್ತು ಭೂ ಸ್ಪರ್ಶ ಮಾಡಿದೆ. ಆದರೆ, ಬಲಬದಿಯ ಮತ್ತೊಂದು ಟಯರ್ ಕೂಡ ಸ್ಫೋಟಗೊಂಡಿದೆ. 

ವಿಮಾನವು ಸುರಕ್ಷಿತವಾಗಿ ಭೂ ಸ್ಪರ್ಶ ಮಾಡಿದ್ದು, ಅದರಲ್ಲಿದ್ದ 199 ಪ್ರಯಾಣಿಕರಿನ್ನು ಸುರಕ್ಷಿರವಾಗಿ ಕೆಳಗಿಳಿಸಲಾಗಿದೆ ಎಂದು ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಟ್ವೀಟ್‌ ಮಾಡಿದ್ದಾರೆ.

ಟಯರ್‌ ಸ್ಫೋಟಗೊಂಡ ರನ್‌ ವೇಯನ್ನು ಇಂದು ಸಂಜೆ 6ವರಗೆ ಮುಚ್ಚಲಾಗಿದೆ ಎಂದು ವರದಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry