ನಾನು ಲವರ್ ಆಫ್ ಜಾನು

7

ನಾನು ಲವರ್ ಆಫ್ ಜಾನು

Published:
Updated:

ಚಂದ್ರು ಕೆ.ವಿ., ರಾಜು ಕಲ್ಕುಣಿಕೆ, ವಿಷ್ಣು ಭಂಡಾರಿ ಮತ್ತು ರವಿಶಂಕರ್ ಕೆ.ಜಿ. ನಿರ್ಮಿಸಿರುವ ಚಿತ್ರ ಇದು. ಸುರೇಶ್ ಜಿ ಈ ಚಿತ್ರದ ನಿರ್ದೇಶಕ. ಮಧ್ಯಮ ವರ್ಗದ ಕುಟುಂಬದವರು ಪ್ರೀತಿಸಿದರೆ ಆಗುವ ತವಕ ತಲ್ಲಣಗಳನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ವಿಶಾಲ್, ಮಂಜುಳಾ, ರೋಹಿತ್ ತಾರಾಗಣದಲ್ಲಿ ಇದ್ದಾರೆ.

*

ಪ್ರೇಮ ಬರಹ

ಅರ್ಜುನ್ ಸರ್ಜಾ ನಿರ್ಮಿಸಿ, ನಿರ್ದೇಶಿಸಿರುವ ಚಿತ್ರ ಇದು. ಚಂದನ್ ನಾಯಕರಾಗಿ ನಟಿಸಿರುವ ಈ ಚಿತ್ರದಲ್ಲಿ ಐಶ್ವರ್ಯ ಅರ್ಜುನ್ ನಾಯಕಿ. ಸಾಧು ಕೋಕಿಲ, ರಂಗಾಯಣ ರಘು, ವಿಶ್ವನಾಥ್, ಸುಹಾಸಿನಿ, ಪ್ರಕಾಶ್ ರೈ ತಾರಾಬಳಗದಲ್ಲಿದ್ದಾರೆ. ದರ್ಶನ್, ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಒಂದು ಹಾಡಿನಲ್ಲಿ ಸ್ನೇಹಪೂರ್ವಕವಾಗಿ ನಟಿಸಿದ್ದಾರೆ.

ರಘುವೀರ

ಧೇನು ಅಚ್ಚಪ್ಪ ನಿರ್ಮಿಸಿರುವ ಈ ಚಿತ್ರದ ನಿರ್ದೇಶನ ಸೂರ್ಯ ಸತೀಶ್ ಅವರದ್ದು. ಲಯ ಕೋಕಿಲ ಸಂಗೀತ, ವಿಜಯ್ ಛಾಯಾಗ್ರಹಣ ಚಿತ್ರಕ್ಕಿದೆ. ತಾರಾಬಳಗದಲ್ಲಿ ಹರ್ಷ, ಧೇನು ಅಚ್ಚಪ್ಪ, ಸ್ವಾಮಿನಾಥನ್, ರೋಬೊ ಗಣೇಶ್, ಮೈತ್ರಿ ಜಗದೀಶ್, ಗಜೇಂದ್ರ, ಅಂಜಲಿ, ಅಪೂರ್ವಶ್ರೀ ಮುಂತಾದವರು ಇದ್ದಾರೆ.

ಸಂಹಾರ

ವೆಂಕಟೇಶ್ ಆರ್. ಸುಂದರ ಕಾಮರಾಜ್ ನಿರ್ಮಾಣದ ಚಿತ್ರ ಇದು. ಇದರ ನಿರ್ದೇಶನ ಗುರು ದೇಶಪಾಂಡೆ ಅವರದ್ದು. ಜೆ.ಎಸ್. ವಾಲಿ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ. ಚಿರಂಜೀವಿ ಸರ್ಜಾ, ಹರಿಪ್ರಿಯಾ, ಕಾವ್ಯಾ ಶೆಟ್ಟಿ, ಚಿಕ್ಕಣ್ಣ, ತಬಲಾ ನಾಣಿ, ಯಶ್‍ ಶೆಟ್ಟಿ ಹಾಗೂ ಇತರರು ತಾರಾಬಳಗದಲ್ಲಿ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry