ಬುಧವಾರ, ಡಿಸೆಂಬರ್ 11, 2019
24 °C

ಅತಿ ದೊಡ್ಡ ಗಿಟಾರ್‌ ಕಟ್ಟಡ

Published:
Updated:
ಅತಿ ದೊಡ್ಡ ಗಿಟಾರ್‌ ಕಟ್ಟಡ

ಫ್ಲೋರಿಡಾದ ಮಿಯಾಮಿ ಈಗ ಸುದ್ದಿಯಲ್ಲಿದೆ. ಇದಕ್ಕೆ ಕಾರಣ ಇಲ್ಲಿ ಗಿಟಾರ್‌ ಮಾದರಿಯ ಕಟ್ಟಡ ನಿರ್ಮಾಣವಾಗುತ್ತಿರುವುದು.  ಪ್ರಪಂಚದ ಅತಿ ದೊಡ್ಡ ಗಿಟಾರ್‌ ಮಾದರಿ ಕಟ್ಟಡ ಎನ್ನುವ ಹೆಗ್ಗಳಿಕೆ ಪಡೆದಿರುವ ಇದು 2019ರಲ್ಲಿ ತಲೆಎತ್ತಲಿದೆ.

ಸೆಮಿನೊಲ್‌ ಹಾರ್ಡ್‌ ರಾಕ್‌ ಹಾಲಿವುಡ್‌ ಸಂಕೀರ್ಣದಲ್ಲಿ 638 ಕೊಠಡಿಯ ಹೋಟೆಲ್‌ ಇರಲಿದೆ. ಹೊಸ ಕಟ್ಟಡದಲ್ಲಿ ನೀಲಿ ಗಾಜಿನ ಕಿಟಕಿಗಳು, ಹಲವಾರು ರೆಸ್ಟೊರೆಂಟ್‌ಗಳು, ವಿಶ್ರಾಂತಿ ಕೊಠಡಿಗಳು ಮತ್ತು 41,000 ಚದರ ಅಡಿಯ ಸ್ಪಾ ಸೌಲಭ್ಯ ಇದೆ. ಹತ್ತು ಎಕರೆ ಪ್ರದೇಶದಲ್ಲಿ ಈಜುಕೊಳ ಇರುವುದು ಇಲ್ಲಿಯ ಮತ್ತೊಂದು ವಿಶೇಷ. ಈ ಈಜುಕೊಳದ ಮಧ್ಯದಲ್ಲಿಯೇ ಹಲವು ವಿಲ್ಲಾಗಳು ಇವೆ.

ಗಿಟಾರ್‌ ಮಾದರಿಯ ಕಟ್ಟಡ ನಿರ್ಮಾಣವಾಗುತ್ತಿವುದು ಇದೇ ಮೊದಲೇನಲ್ಲ. ವಾಸ್ತುಶಿಲ್ಪಿ ಗ್ಲೆನ್ ವಿಲಿಯಮ್ಸ್ ಗಿಟಾರ್‌ ಮಾದರಿಯ ಮನೆಯನ್ನು ವಾಸಕ್ಕಾಗಿ ನಿರ್ಮಿಸಿಕೊಂಡಿದ್ದರು.

ಇಲ್ಲಿ ಕ್ಯಾಸಿನೊ, ಬ್ಲೀಚ್‌ ಕ್ಲಬ್‌ ಡೈನಿಂಗ್‌ ಮತ್ತು ನೀರಿನ ಕ್ರೀಡಾಕೂಟಗಳು ನಡೆಯಲಿದೆ. ಸಮಾರಂಭಗಳು ನಡೆಯುವ ಸ್ಥಳದಲ್ಲಿ 7,000 ಆಸನಗಳ ವ್ಯವಸ್ಥೆಯೂ ಇರಲಿದೆ. 2007ರಲ್ಲಿ ಈ ಕಟ್ಟಡ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿತ್ತು.

ಪ್ರತಿಕ್ರಿಯಿಸಿ (+)