ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಸಾಯನಿಕ ನಿಯಂತ್ರಿಸಿ

ಅಕ್ಷರ ಗಾತ್ರ

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪೈಪೋಟಿಗೆ ಬಿದ್ದಂತೆ ಜನರಿಗಾಗಿ ಆರೋಗ್ಯ ಕಾರ್ಯಕ್ರಮಗಳನ್ನು ರೂಪಿಸಲು ಮುಂದಾಗಿರುವುದು ಶ್ಲಾಘನೀಯ. ಆರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತಿರುವ ಇಂದಿನ ದಿನಗಳಲ್ಲಿ ಇದು ಅಗತ್ಯವೂ ಆಗಿದೆ.

ಆದರೆ ಈ ಸಮಸ್ಯೆ ಉಲ್ಬಣಗೊಳ್ಳಲು ಮನುಷ್ಯನೇ ಕಾರಣ ಎಂಬುದನ್ನೂ ಮನಗಾಣಬೇಕು. ಅಭಿವೃದ್ಧಿಯ ವೇಗಕ್ಕೆ ಬಿದ್ದು ನೆಲ, ಜಲ, ಗಾಳಿಯನ್ನು ಮಲಿನಗೊಳಿಸಲಾಗಿದೆ. ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆ, ತರಕಾರಿ ಬೆಳೆಗಳಿಗೆ ಮಿತಿಮೀರಿ ಕೀಟನಾಶಕ ಬಳಸಿದ್ದರಿಂದ ಅನೇಕ ಪ್ರಾಣಿ– ಪಕ್ಷಿ, ಕೀಟ, ಹಾವು, ಜಲಚರಗಳು ಸಾಯುವಂತಾಗಿದೆ. ಅದರಿಂದ ಪ್ರಕೃತಿಯಲ್ಲಿ ಅಸಮತೋಲ ಸೃಷ್ಟಿಯಾಗಿದೆ.

ಅತಿಯಾಸೆಗೆ ಬಿದ್ದಿರುವ ಮನುಷ್ಯ, ನೈಸರ್ಗಿಕವಾಗಿ ಆಗಬೇಕಾದ ಕ್ರಿಯೆಗಳನ್ನೂ ಕೃತಕವಾಗಿ ಮಾಡಲಾರಂಭಿಸಿದ್ದಾನೆ. ಕೃತಕ ಮಳೆ, ಹಣ್ಣುಗಳನ್ನು ಕೃತಕವಾಗಿ ಮಾಗುವಂತೆ ಮಾಡುವುದು, ಚುಚ್ಚು ಮದ್ದು ಕೊಟ್ಟು ಪ್ರಾಣಿಗಳು ಕೊಬ್ಬುವಂತೆ ಮಾಡಿ ಮಾಂಸೋತ್ಪಾದನೆ ಮಾಡುವುದು... ಇವೆಲ್ಲವೂ ಅಸಹಜ ಪ್ರಕ್ರಿಯೆಗಳೇ ಸರಿ. ರೋಗರುಜಿನ ಹೆಚ್ಚಲು ಇವೂ ಕಾರಣ. ಸರ್ಕಾರಗಳು ಇವುಗಳ ಮೇಲೆ ನಿಯಂತ್ರಣ ಹೇರುವುದು ಅಗತ್ಯ.

ರಾಸಾಯನಿಕಗಳಿಂದ ದೂರವಿದ್ದು, ಸಾವಯವ ಕೃಷಿ, ಎರೆಹುಳು ಸಂವರ್ಧನೆ, ಅಂತರ್ಜಲ ವೃದ್ಧಿ, ಅರಣ್ಯ ಸಂರಕ್ಷಣೆಯಂಥ ಕ್ರಮಗಳಿಗೆ ಸರ್ಕಾರಗಳು ಮುಂದಾಗಬೇಕು. ಹೀಗಾದರೆ ಮಾತ್ರ ಆರೋಗ್ಯವಂತ, ಸದೃಢ ಸಮಾಜ ನಿರ್ಮಿಸಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT