ಗುರುವಾರ , ಡಿಸೆಂಬರ್ 12, 2019
26 °C

ನಕಲಿ ಖಾತೆ ಸೃಷ್ಟಿಸಲು ಹೇಳಿಲ್ಲ

Published:
Updated:
ನಕಲಿ ಖಾತೆ ಸೃಷ್ಟಿಸಲು ಹೇಳಿಲ್ಲ

ಬೆಂಗಳೂರು: ‌‘ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಅಕೌಂಟ್‌ ಕ್ರಿಯೇಟ್‌ ಮಾಡುವಂತೆ ನಾನು ಎಲ್ಲೂ ಹೇಳಿಲ್ಲ’ ಎಂದು ಎಐಸಿಸಿ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ ರಮ್ಯಾ ಸ್ಪಷ್ಟಪಡಿಸಿದರು.

ಕೆಪಿಸಿಸಿ ಸಾಮಾಜಿಕ ಜಾಲತಾಣ ಘಟಕದ ಸಭೆಯ ಬಳಿಕ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ರೀತಿ ಯಾರಿಗೂ ನಾನು ಪಾಠ ಮಾಡಿಲ್ಲ. ಪಕ್ಷಕ್ಕೆ ಒಂದು, ವೈಯಕ್ತಿಕವಾಗಿ ಮತ್ತೊಂದು ಅಕೌಂಟ್‌ ಇಟ್ಟುಕೊಳ್ಳಿ ಎಂದು ಹೇಳಿದ್ದೇನೆ ಅಷ್ಟೆ’ ಎಂದರು.

‘ನರೇಂದ್ರ ಮೋದಿ ಅವರಹೆಸರಿನ ಮೇಲೆ ಮೂರು ಅಕೌಂಟ್‌ಗಳಿವೆ’ ಎಂದೂ ತಮ್ಮಸ್ಪಷ್ಟೀಕರಣಕ್ಕೆ ಸಮಜಾಯಿಷಿ ನೀಡಿದರು.

‘ಪಾಟ್‌ (POT) ಎಂಬ ಪದಕ್ಕೆ ವಿಶೇಷ ಅರ್ಥ ನೀಡುವ ಅಗತ್ಯ ಇಲ್ಲ. ಪ್ರಧಾನಿ ಮೋದಿ ಬಳಸಿದ TOP (ಟೊಮೆಟೊ, ಆನಿಯನ್‌, ಪೊಟ್ಯಾಟೊ) ಎಂಬ ಪದದ ಅರ್ಥದಲ್ಲಿಯೇ ಹೇಳಿದ್ದೇನೆ’ ಎಂದರು.

‘ಜಗ್ಗೇಶ್ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಲ್ಲ‌. ಅವರು ದೊಡ್ಡವರು’ ಎಂದೂ ಹೇಳಿದರು.

ಪ್ರತಿಕ್ರಿಯಿಸಿ (+)