ವರ್ತೂರು ವಿರುದ್ಧದ ದೂರು: ತಡೆಗೆ ಹೈಕೋರ್ಟ್ ನಕಾರ

7

ವರ್ತೂರು ವಿರುದ್ಧದ ದೂರು: ತಡೆಗೆ ಹೈಕೋರ್ಟ್ ನಕಾರ

Published:
Updated:

ಬೆಂಗಳೂರು: ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೊಬ್ಬರನ್ನು ಜಾತಿ ಆಧಾರದಲ್ಲಿ ನಿಂದಿಸಿ ಆಕೆಗೆ ಜೀವ ಬೆದರಿಕೆ ಹಾಕಿದ ಆರೋಪಿ ಶಾಸಕ ವರ್ತೂರು ಪ್ರಕಾಶ್ ವಿರುದ್ದದ ‍‍ಪ್ರಕರಣಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

‘ನನ್ನ ವಿರುದ್ಧ ಕೋಲಾರ ಗ್ರಾಮೀಣ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು’ ಎಂದು ಕೋರಿ ವರ್ತೂರು ಪ್ರಕಾಶ್ ಮತ್ತು ಅವರ ಸಂಬಂಧಿ ವಿ.ಪಿ.ರಕ್ಷಿತ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಅರ್ಜಿಗೆ ಸಂಬಂಧಿಸಿದಂತೆ ಕೋಲಾರ ಗ್ರಾಮೀಣ ಠಾಣೆ ಪೊಲೀಸರು ಮತ್ತು ಪ್ರಕರಣದ ದೂರುದಾರರಾದ ಬೆಗ್ಲಿ ಹೊಸಹಳ್ಳಿಯ ಚನ್ನಮ್ಮ ಅವ

ರಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.

‘ಕೋಲಾರ ತಾಲ್ಲೂಕು ಕಸಬಾ ಹೋಬಳಿ ಚಿನ್ನೇನಹಳ್ಳಿಯ ಸರ್ವೇ ನಂಬರ್ 21ರಲ್ಲಿನ 1 ಎಕರೆ 30 ಗುಂಟೆ ಜಮೀನು ಮಾಲೀಕತ್ವದ ಸಂಬಂಧ  ವಿ.ಪಿ.ರಕ್ಷಿತ್ ಮತ್ತು ನನ್ನ ನಡುವೆ ವ್ಯಾಜ್ಯವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry