ಮಂಗಳವಾರ, ಡಿಸೆಂಬರ್ 10, 2019
20 °C

ಅಗ್ನಿಪರೀಕ್ಷೆಯೇ ಸರಿ

Published:
Updated:
ಅಗ್ನಿಪರೀಕ್ಷೆಯೇ ಸರಿ

ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ತಮ್ಮ ಮೂಗಿನ ನೇರಕ್ಕೆ ತಮ್ಮನ್ನು ಬಿಂಬಿಸಿಕೊಂಡಿದ್ದಾರೆ. ಈ ಮೂವರ ಕಾರ್ಯವೈಖರಿಯನ್ನು ಜನ ಈಗಾಗಲೇ ಕಂಡಿದ್ದಾರೆ.

ಜನಪರ ಕಾಳಜಿಯನ್ನು ಅರಿತು ಸ್ಪಂದಿಸುವವರಿಗೆ ಮತದಾರ ಮಣೆ ಹಾಕಬಹುದು. ಮುಖ್ಯವಾಗಿ, ರೈತರ ಕುಂದುಕೊರತೆಗಳನ್ನು ನೀಗಿಸುವ ಛಲವಿರುವವರಿಗೆ ಅವನ ಆದ್ಯತೆ ದೊರಕುತ್ತದೆ.

ಒಟ್ಟಾರೆ, ಈ ಚುನಾವಣೆ ಮೂವರಿಗೂ ಅಗ್ನಿಪರೀಕ್ಷೆಯೇ ಸರಿ.

-ವಿ.ವಿಜಯೇಂದ್ರ ರಾವ್, ಬೆಂಗಳೂರು

ಹುಡುಕಬೇಕು!

ಶಿಕ್ಷಣ, ಆರೋಗ್ಯ ಕ್ಷೇತ್ರಗಳು ಇಂದು ವ್ಯಾಪಾರೀಕರಣಗೊಳ್ಳುತ್ತಿವೆ. ಇದನ್ನು ತಡೆಗಟ್ಟಿ, ಬಡವರ ಪರವಾದ ಸಮರ್ಥ ರಾಜಕೀಯ ನಾಯಕನಿಗೆ ವೋಟು ಹಾಕಿ ಆರಿಸಬೇಕು. ಅಂದಾಗ ಮಾತ್ರ ದೇಶ ಉದ್ಧಾರವಾಗುತ್ತದೆ. ಆದರೆ, ನಾವು ಇಂದು ಅಂತಹ ವ್ಯಕ್ತಿಯನ್ನು ಹಗಲಿನಲ್ಲಿ ಬ್ಯಾಟರಿ ಹಚ್ಚಿ ಹುಡುಕಬೇಕಾಗಿದೆ!

-ಎಲ್.ಪಿ.ಕುಲಕರ್ಣಿ, ಬಾದಾಮಿ

ಕಾಡು ಉಳಿಸಿ...

ಮುಂದೆ ಅಧಿಕಾರಕ್ಕೆ ಬರುವ ಸರ್ಕಾರವು ಕಾಡು ಉಳಿಸುವ ಪ್ರಯತ್ನ ಮಾಡಲೇಬೇಕಿದೆ. ಕಾಡು ಪ್ರಾಣಿಗಳು ಈಗಾಗಲೇ ನಾಡಿನತ್ತ ಮುಖಮಾಡಿ, ರೈತರ ಜಮೀನು, ಮನೆಗಳ ಮೇಲೆ ದಾಳಿ ಮಾಡುತ್ತಿವೆ. ಇದು ಹೀಗೇ ಮುಂದುವರಿದರೆ ಸಾಮಾನ್ಯರ ಪಾಡು ಹೇಳ ತೀರದಾಗುತ್ತದೆ.

ರಾಜಕಾರಣಿಗಳು ಮೊದಲು ಕಾಡು ಉಳಿಸಿ ನಂತರ ನಾಡನ್ನು ಬೆಳೆಸುವ ಮಾತನಾಡಬೇಕು.

-ಸಂಪತ್ ಬೆಟ್ಟಗೆರೆ, ಮೂಡಿಗೆರೆ

‘ಪ್ರಜಾ ಮತ’ದಲ್ಲಿ ಪ್ರಕಟವಾಗುವ ಲೇಖನ, ವಿಶ್ಲೇಷಣೆ, ಸಂದರ್ಶನ, ವಿಶೇಷ ವರದಿಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು election@prajavani.co.in ಅಥವಾ ವಾಟ್ಸ್‌ ಆ್ಯಪ್‌ ಸಂಖ್ಯೆ 9513322930ಗೆ ಕಳುಹಿಸಿ.

ಪ್ರತಿಕ್ರಿಯಿಸಿ (+)