ವಿಷದ ಬಾಟಲಿ ಹಿಡಿದು ರೈತರ ಧರಣಿ

7

ವಿಷದ ಬಾಟಲಿ ಹಿಡಿದು ರೈತರ ಧರಣಿ

Published:
Updated:

ಬೆಂಗಳೂರು: ‘ನ್ಯಾಯಾಲಯ ಆದೇಶ ನೀಡಿದರೂ ಸ್ಥಳೀಯ ಕಾಂಗ್ರೆಸ್‌ ಶಾಸಕ ವಡ್ನಾಳ್ ರಾಜಣ್ಣ ಮತ್ತು ತಹಶೀಲ್ದಾರ್ ಮೋಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ 35ಕ್ಕೂ ಹೆಚ್ಚು ರೈತರು ಕೆಪಿಸಿಸಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.‌

‘100 ವರ್ಷದಿಂದ ಗೋಮಾಳದಲ್ಲಿ ಕೃಷಿ ಮಾಡುತ್ತಿದ್ದೇವೆ. ಹಕ್ಕುಪತ್ರ ಕೊಡಿ, ಇಲ್ಲದಿದ್ದರೆ ನಮ್ಮ ಸಾವಿಗೆ ಅನುಮತಿ ಕೊಡಿ’ ಎಂದು ವಿಷದ ಬಾಟಲಿ ಹಿಡಿದು ರೈತರು ಧರಣಿ ನಡೆಸಿದರು. ಸಮಸ್ಯೆ ಬಗೆಹರಿಯುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದೂ ಪಟ್ಟು ಹಿಡಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ವಡ್ನಾಳ್ ರಾಜಣ್ಣ ಅವರನ್ನು ಪ್ರತಿಭಟನೆಕಾರರು ತರಾಟೆಗೆ ತೆಗೆದುಕೊಂಡರು. ಆರಂಭದಲ್ಲಿ ರಾಜಣ್ಣ ಮಾತಿಗೆ ಒಪ್ಪದ ರೈತರು, ಸಮಸ್ಯೆ ಬಗೆಹರಿಸುವ ಭರವಸೆ ಸಿಕ್ಕಿದ ಬಳಿಕ ಧರಣಿ ಹಿಂತೆಗೆದುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry