ಗ್ರಾನೈಟ್‌ ಅಂಗಡಿಗಳ ಮೇಲೆ ದಾಳಿ

7

ಗ್ರಾನೈಟ್‌ ಅಂಗಡಿಗಳ ಮೇಲೆ ದಾಳಿ

Published:
Updated:

ದಾಬಸ್‌ಪೇಟೆ: ಇಲ್ಲಿನ ಜನನಿ ಗ್ರಾನೈಟ್ ಮತ್ತು ಲಕ್ಷ್ಮೀವೆಂಕಟೇಶ್ವರ ಗ್ರಾನೈಟ್ ಅಂಗಡಿಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಸುಮಾರು ₹5 ಲಕ್ಷ ಮೌಲ್ಯ ಕಲ್ಲುಗಳನ್ನು ಒಡೆದುಹಾಕಿದ್ದಾರೆ.

‘ಗುರುವಾರ ಬೆಳಿಗ್ಗೆ 7.30ಕ್ಕೆ ಅಂಗಡಿಗೆ ಬಂದಾಗ ಈ ವಿಷಯ ಗೊತ್ತಾಗಿದೆ. ಗ್ರಾನೈಟ್, ಕಡಪಕಲ್ಲುಗಳನ್ನು ಒಡೆದು ಹಾಕಿದ್ದಾರೆ. ₹4 ಲಕ್ಷ ನಷ್ಟವಾಗಿದೆ’ ಎಂದು ಲಕ್ಷ್ಮೀವೆಂಕಟೇಶ್ವರ ಗ್ರಾನೈಟ್ ಅಂಗಡಿ ಮಾಲೀಕರು ವಿವರಿಸಿದರು.

‘ಎರಡು ವರ್ಷದಿಂದ ವ್ಯಾಪಾರ ಮಾಡುತ್ತಿದ್ದೇನೆ. ಈ ರೀತಿ ಯಾವಾಗಲೂ ಆಗಿಲ್ಲ. ಯಾರು ಮಾಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಇದರಿಂದ ₹1.50 ಲಕ್ಷ ನಷ್ಟವಾಗಿದೆ’ ಜನನಿ ಗ್ರಾನೈಟ್ ಅಂಗಡಿಯ ಮಾಲೀಕ ರವಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry