ಶುಕ್ರವಾರ, ಡಿಸೆಂಬರ್ 6, 2019
25 °C
ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ವುಮನ್‌ ಸ್ಮೃತಿ ಮಂದಾನ

ಬಾಟಾ ರಾಯಭಾರಿ ‌ಸ್ಮೃತಿ ಮಂದಾನ

Published:
Updated:
ಬಾಟಾ ರಾಯಭಾರಿ ‌ಸ್ಮೃತಿ ಮಂದಾನ

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ವುಮನ್‌ ಸ್ಮೃತಿ ಮಂದಾನ ಅವರನ್ನು ಬಾಟಾದ ಕ್ರೀಡಾ ಉತ್ಪನ್ನ ‘ಪವರ್‌’ನ ರಾಯಭಾರಿಯಾಗಿ ಮಾಡಲಾಗಿದೆ. ‌ಮಹಿಳಾ ವಿಶ್ವಕಪ್‌ ಟೂರ್ನಿಯಲ್ಲಿ ಅಮೋಘ ಆಟ ಆಡಿದ ಮಂದಾನ ಅವರಿಗೆ ದೇಶದಲ್ಲಿ ಅಪಾರ ಅಭಿಮಾನಿಗಳು ಇದ್ದಾರೆ.

‘ಬಾಟಾದ ಪವರ್‌ ಉತ್ಪನ್ನಗಳು ನನ್ನ ಜೀವನ ವಿಧಾನಕ್ಕೆ ಹತ್ತಿರವಾಗಿವೆ. ಬಾಟಾದವರು ಕ್ರೀಡೆಗೆ ನೀಡುವ ಆದ್ಯತೆ ಮೆಚ್ಚುವಂಥಾದ್ದು. ಹೀಗಾಗಿ ಅವರು ನನ್ನನ್ನು ಸಂಪರ್ಕಿಸಿದಾಗ ರಾಯಭಾರಿಯಾಗಲು ಒಪ್ಪಿಕೊಂಡೆ’ ಎಂದು ಮಂದಾನ ಹೇಳಿದ್ದಾರೆ.

‘ಭಾರತದ ಅತ್ಯಂತ ಹೆಸರುವಾಸಿ ಆಟಗಾರರಲ್ಲಿ ಮಂದಾನ ಕೂಡ ಒಬ್ಬರು. ಹೀಗಾಗಿ ಅವರನ್ನು ನಮ್ಮ ಉತ್ಪನ್ನದ ರಾಯಭಾರಿಯನ್ನಾಗಿ ಮಾಡಲು ಮುಂದಾಗಿದ್ದೇವೆ’ ಎಂದು ಬಾಟಾ ಇಂಡಿಯಾದ ವ್ಯವಸ್ಥಾಪಕ ಸಂದೀಪ್‌ ಕಟಾರಿಯಾ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)