ಸೋಮವಾರ, ಡಿಸೆಂಬರ್ 9, 2019
25 °C

ಗೂಗಲ್‌ಗೆ ₹136 ಕೋಟಿ ದಂಡ

Published:
Updated:
ಗೂಗಲ್‌ಗೆ ₹136 ಕೋಟಿ ದಂಡ

ನವದೆಹಲಿ: ಕಾನೂನುಬಾಹಿರ ವ್ಯವಹಾರ ನಡೆಸಿದ ಆರೋಪಕ್ಕಾಗಿ ಭಾರತೀಯ ಸ್ಪರ್ಧಾತ್ಮಕ ಆಯೋಗ ಗೂಗಲ್‌ ಕಂಪನಿಗೆ ₹136 ಕೋಟಿ ದಂಡ ವಿಧಿಸಿದೆ.

‘ವಿಶ್ವಾಸ ದ್ರೋಹ ನಡವಳಿಕೆಗಾಗಿ ಗೂಗಲ್‌ ಕಂಪನಿಗೆ ದಂಡ ವಿಧಿಸಲಾಗಿದೆ’ ಎಂದು ಆಯೋಗ ತಿಳಿಸಿದೆ.

2012ರಲ್ಲಿ ಸಲ್ಲಿಸಿದ್ದ ದೂರುಗಳ ಆಧಾರದ ಮೇಲೆ ಈ ದಂಡ ವಿಧಿಸಲಾಗಿದೆ. ಭಾರತೀಯ ಮಾರುಕಟ್ಟೆಯ ಸಂಪೂರ್ಣ ನಿಯಂತ್ರಣ ಸಾಧಿಸಲು ಕೆಲವು ಕಾನೂನು ಬಾಹಿರ ಕ್ರಮಗಳನ್ನು ಗೂಗಲ್‌ ಕೈಗೊಂಡಿತ್ತು ಎಂದು ಆರೊಪಿಸಲಾಗಿತ್ತು.

ಗೂಗಲ್‌ ವಿರುದ್ಧ 2012ರಲ್ಲಿ ಮ್ಯಾಟ್ರಿಮೊನಿ ಡಾಟ್ ಕಾಮ್‌ ಮತ್ತು ಕನ್ಸೂಮರ್‌ ಯೂನಿಟಿ ಹಾಗೂ ಟ್ರಸ್ಟ್‌ ಸೊಸೈಟಿ ದೂರು ಸಲ್ಲಿಸಿದ್ದವು.

ಪ್ರತಿಕ್ರಿಯಿಸಿ (+)