ಸೋಮವಾರ, ಡಿಸೆಂಬರ್ 9, 2019
24 °C
1500 ಮೀಟರ್‌ ಓಟದ ಸ್ಪರ್ಧೆಯಲ್ಲಿ ವಿಜೇತ

ಮೈಸೂರಿನ ಯೋಗೇಂದ್ರಗೆ ಚಿನ್ನ

Published:
Updated:
ಮೈಸೂರಿನ ಯೋಗೇಂದ್ರಗೆ ಚಿನ್ನ

ಮೈಸೂರು: ಮೈಸೂರು ಅಥ್ಲೆಟಿಕ್ಸ್‌ ಕ್ಲಬ್‌ನ ಎಂ.ಯೋಗೇಂದ್ರ ಅವರು ಹೈದರಾಬಾದ್‌ನಲ್ಲಿ ನಡೆಯುತ್ತಿರುವ 50ನೇ ದಕ್ಷಿಣ ವಲಯ ಕೇಂದ್ರೀಯ ಕಂದಾಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಜಿ.ಎಂ.ಸಿ.ಬಾಲಯೋಗಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ 50 ವರ್ಷ ಮೇಲಿನವರ ವಿಭಾಗದ 1,500 ಮೀಟರ್‌ ಓಟದ ಸ್ಪರ್ಧೆಯಲ್ಲಿ ಅವರು ಈ ಸಾಧನೆ ಮಾಡಿದರು. ಬೆಳ್ಳಿ ಪದಕ ಆದಾಯ ತೆರಿಗೆ ಇಲಾಖೆಯ ಮಹಾದೇವಯ್ಯ ಪಾಲಾಯಿತು.

ಕೇಂದ್ರೀಯ ತೆರಿಗೆ ಇಲಾಖೆಯ ಅಧೀಕ್ಷಕರಾಗಿರುವ ಯೋಗೇಂದ್ರ ಅವರು 400 ಮೀಟರ್‌ ಓಟದಲ್ಲಿ ಬೆಳ್ಳಿ ಪದಕ ಗೆದ್ದು ಮತ್ತೊಂದು ಸಾಧನೆಗೆ ಪಾತ್ರರಾದರು.

ಪ್ರತಿಕ್ರಿಯಿಸಿ (+)