ಶುಕ್ರವಾರ, ಡಿಸೆಂಬರ್ 6, 2019
25 °C

ಪಂಜಾ ಕುಸ್ತಿ ಎಂ.ರಾಜು ಚಾಂಪಿಯನ್‌

Published:
Updated:
ಪಂಜಾ ಕುಸ್ತಿ ಎಂ.ರಾಜು ಚಾಂಪಿಯನ್‌

ಬೆಂಗಳೂರು: ಮೈಸೂರಿನ ಎಂ.ರಾಜು ಅವರು ಇಲ್ಲಿ ನಡೆದ ರಾಜ್ಯ ಪಂಜಾಕುಸ್ತಿ ಸ್ಪರ್ಧೆಯಲ್ಲಿ ಚಾಂಪಿಯನ್‌ ಆಗಿದ್ದಾರೆ.

ಕರ್ನಾಟಕ ಪಂಜಾಕುಸ್ತಿ ಸಂಸ್ಥೆ ಆಯೋಜಿಸಿದ್ದ ಚಾಂಪಿಯನ್‌ಷಿಪ್‌ನಲ್ಲಿ ಅವರು ಕರ್ನಾಟಕ ಭೀಮ–2018, ಕರ್ನಾಟಕ ಕರ್ಣ–2018 ಪ್ರಶಸ್ತಿ ಜಯಿಸಿದ್ದಾರೆ. ಸಮಗ್ರ ಪಶಸ್ತಿಯೂ ಅವರ ಪಾಲಾಯಿತು. ಫೈನಲ್‌ನಲ್ಲಿ ಹಾಸನದ ವಿಷ್ಣು ಎದುರು ಗೆದ್ದರು.

ಚಾಂಪಿಯನ್‌ಷಿಪ್‌ನಲ್ಲಿ 150ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡು ತೋಳ್ಬಲ ಪ್ರದರ್ಶಿಸಿದರು. ಶಕ್ತಿ ಪ್ರಯೋಗಿಸಿ ಎದುರಾಳಿ ಕೈಯನ್ನು ನೆಲಕ್ಕೆ ತಾಗಿಸಿ ಸಂಭ್ರಮಿಸಿದರು.

ರಾಜು ಅವರು ಮೇ 9ರಿಂದ 14ರವರೆಗೆ ಲಖನೌದಲ್ಲಿ ನಡೆಯಲಿರುವ ರಾಷ್ಟ್ರೀಯ ಪಂಜಾಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರತಿಕ್ರಿಯಿಸಿ (+)