ಶುಕ್ರವಾರ, ಡಿಸೆಂಬರ್ 13, 2019
27 °C

ಸ್ಕ್ವಾಷ್: ಎಂಟರ ಘಟ್ಟಕ್ಕೆ ಸಂಧು

ಪಿಟಿಐ Updated:

ಅಕ್ಷರ ಗಾತ್ರ : | |

ಸ್ಕ್ವಾಷ್: ಎಂಟರ ಘಟ್ಟಕ್ಕೆ ಸಂಧು

ಮುಂಬೈ: ಹರೀಂದರ್ ಪಾಲ್ ಸಂಧು ಅವರು ಇಲ್ಲಿ ನಡೆಯುತ್ತಿರುವ ವೇದಾಂತ್ ಇಂಡಿಯನ್  ಸ್ಕ್ವಾಷ್ ಓಪನ್ ಟೂರ್ನಿಯಲ್ಲಿ ಜಯಿಸಿದರು.

ಮೊದಲ ಪಂದ್ಯದಲ್ಲಿ ಸಂಧು 11–7, 12–10, 5–11, 11–8 ರಿಂದ ಮೂರನೇ ಶ್ರೇಯಾಂಕದ ಸ್ಕಾಟ್ ಗ್ರೆಬ್ ಲೊಬನ್ ವಿರುದ್ಧ ಜಯಿಸಿದರು. 51 ನಿಮಿಷಗಳ ಪಂದ್ಯದಲ್ಲಿ ಸಂಧು ಉತ್ತಮವಾಗಿ ಆಡಿದರು.

ಇನ್ನೊಂದು ಸುತ್ತಿನಲ್ಲಿ ಭಾರತದ ಅಗ್ರಶ್ರೇಯಾಂಕದ ಆಟಗಾರ ಸೌರವ್ ಘೋಷಾಲ್ 3–0ಯಿಂದ ಈಜಿಪ್ತ್ ನ ಕರೀಂ ಈ ಹಮ್ಮಾಮಿ ವಿರುದ್ಧ ಗೆದ್ದರು. ಅವರು 11–3, 11–4, 11–6ರಿಂದ ಗೆದ್ದರು.

31 ವರ್ಷದ ಸೌರವ್  ಅವರು ಈಗ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ. ವಿಶ್ವ ಶ್ರೇಯಾಂಕದಲ್ಲಿ 14ನೇ ಸ್ಥಾನ ಹೊಂದಿದ್ದಾರೆ.

ಮೊದಲ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ ಈಜಿಪ್ತ್‌ನ ಕರೀಂ ಅಲಿ ಫಾತಿ 11–5, 13–11, 11–9 ರಿಂದ ಮಲೇಷ್ಯಾದ ಇಯಾನ್ ಯೊ ಜಿ ವಿರುದ್ಧ ಗೆದ್ದರು. ಹರಿಂದರ್ ಪಾಲ್ ಸಿಂಗ್ ಸಂಧು 11–7, 12–10, 5–11, 11–8ರಿಂದ ಸ್ಕಾಟ್ಲೆಂಡ್‌ನ ಇಂಗ್ಲೆಂಡ್‌ನ ನೇಥನ್ ಲೇಕ್ ವಿರುದ್ಧ ಗೆದ್ದರು.

ಸ್ಕಾಟ್ಲೆಂಡ್‌ನ ಗ್ರೇಗ್ ಲೊಬನ್ 13–11, 11–6, 11–9ರಿಂದ ಮಲೇಷ್ಯಾದ ಅದ್ದೀನ್ ಇದ್ರಕೀ ವಿರುದ್ಧ ಜಯಿಸಿದರು.

ಪ್ರತಿಕ್ರಿಯಿಸಿ (+)