ಕಾಂಗ್ರೆಸಿಗೆ ಮತಕ್ಷೇತ್ರದ ಕಾಳಜಿಯಿಲ್ಲ: ಬೋರಬಂಡಾ

7

ಕಾಂಗ್ರೆಸಿಗೆ ಮತಕ್ಷೇತ್ರದ ಕಾಳಜಿಯಿಲ್ಲ: ಬೋರಬಂಡಾ

Published:
Updated:

ಗುರುಮಠಕಲ್:  60 ವರ್ಷಗಳಿಂದ ಗುರುಮಠಕಲ್ ಮತ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಳೇ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. ಆದರೆ, ನಮ್ಮ ಮತಕ್ಷೇತ್ರದ ಕುರಿತ ಕನಿಷ್ಠ ಕಾಳಜಿ ಅವರಲ್ಲಿ ಕಾಣುತ್ತಿಲ್ಲ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಸಾಯಿಬಣ್ಣಾ ಬೋರಬಂಡಾ ಆರೋಪಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುಮಠಕಲ್ ಶಾಸಕ ಬಾಬುರಾವ್ ಚಿಂಚನಸೂರ ಅವರು ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಜನರನ್ನು ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಭ್ರಷ್ಟಾಚಾರದ ಆರೋಪಗಳಿರುವ ಅವರನ್ನು ಮುಖ್ಯಮಂತ್ರಿಗಳು ಗಡಿನಾಡು ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷರನ್ನು ಮಾಡಿದ್ದು ಏಕೆ ಎಂಬುದನ್ನು ಮುಖ್ಯಮಂತ್ರಿಗಳು ತಿಳಿಸಬೇಕು ಎಂದು ಹೇಳಿದರು. ಕಾಂಗ್ರೆಸ್‌ಗೆ ಮತ ಕ್ಷೇತ್ರದ ಸಮಸ್ಯೆಗಳ ಕುರಿತು ಕಾಳಜಿಯಿದ್ದರೆ ಮೂಲ ಸೌಕರ್ಯಕ್ಕಾಗಿ ಪರದಾಡು ಸ್ಥಿತಿ ಬರುತ್ತಿರಲಿಲ್ಲ 0ಎಂದರು. ಈ ಬಾರಿ ಜನರು ಸ್ಥಳೀಯರನ್ನು ಆಯ್ಕೆ ಮಾಡುವ ಮೂಲಕ ಮತಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry