ಬಣವೆಗೆ ಬೆಂಕಿ: ₹ 50 ಸಾವಿರ ಹಾನಿ

7

ಬಣವೆಗೆ ಬೆಂಕಿ: ₹ 50 ಸಾವಿರ ಹಾನಿ

Published:
Updated:

ವಿಜಯಪುರ: ವಿದ್ಯುತ್ ತಂತಿಗಳು ಶಾರ್ಟ್ ಆಗಿರುವ ಪರಿಣಾಮ ಹುಲ್ಲಿನ ಬಣವೆಗೆ ಬೆಂಕಿ ಬಿದ್ದು, ₹ 50 ಸಾವಿರಕ್ಕೂ ಹೆಚ್ಚಿನ ರಾಗಿಹುಲ್ಲು ಸುಟ್ಟುಹೋಗಿರುವ ಘಟನೆ ಪಿ.ರಂಗನಾಥಪುರ ಗ್ರಾಮದಲ್ಲಿ ಗುರುವಾರ ನಡೆದಿದೆ.

ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿ.ರಂಗನಾಥಪುರ ಗ್ರಾಮದ ರೈತ ವೆಂಕಟೇಶಪ್ಪ ಎಂಬುವವರಿಗೆ ಸೇರಿದ ಹುಲ್ಲಿನ ಬಣವೆ ಸಮೀಪದ ವಿದ್ಯುತ್ ತಂತಿಗಳು ಶಾರ್ಟ್ ಆಗಿರುವುದರಿಂದ ಬೆಂಕಿ ಹೊತ್ತಿಕೊಂಡು ಖರೀದಿ ಮಾಡಿಕೊಂಡು ಬಂದಿದ್ದ ಹುಲ್ಲು ಸುಟ್ಟುಹೋಗಿದೆ.

ಸ್ಥಳೀಯರು ಟ್ಯಾಂಕರಿನಲ್ಲಿ ನೀರು ತಂದು ಬೆಂಕಿ ನಂದಿಸಲು ಯತ್ನಿಸಿದರಾದರೂ ಸಾಧ್ಯವಾಗದಿದ್ದಾಗ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಕಂದಾಯ ಇಲಾಖೆಯಿಂದ ಸೂಕ್ತ ಪರಿಹಾರವನ್ನು ಒದಗಿಸಬೇಕು ಎಂದು ಗ್ರಾಮದ ಮುಖಂಡರಾದ ಶಿವಪ್ರಕಾಶ್, ನಟರಾಜ್, ಸುಜಾತಮ್ಮ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry