7

ಏಕದಿನ ಕ್ರಿಕೆಟ್‌ನಲ್ಲಿ 401 ವಿಕೆಟ್ ಪಡೆದ ಮಹೇಂದ್ರಸಿಂಗ್ ದೋನಿ: ಹೊಸ ದಾಖಲೆ

Published:
Updated:
ಏಕದಿನ ಕ್ರಿಕೆಟ್‌ನಲ್ಲಿ 401 ವಿಕೆಟ್ ಪಡೆದ ಮಹೇಂದ್ರಸಿಂಗ್ ದೋನಿ: ಹೊಸ ದಾಖಲೆ

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರಸಿಂಗ್ ದೋನಿ ಅವರು ಏಕದಿನ ಕ್ರಿಕೆಟ್‌ನಲ್ಲಿ 401 ವಿಕೆಟ್‌ ಪಡೆದು ಹೊಸ ದಾಖಲೆ ನಿರ್ಮಿಸಿದ್ದಾರೆ.

ದೋನಿ ಅವರು ಪಡೆದಿರುವ 401 ಅಷ್ಟು ವಿಕೆಟ್‌ಗಳಲ್ಲಿ 106 ಸ್ಟಂಪಿಂಗ್ ಮಾಡಿದ್ದಾರೆ. 295 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಂಡರು.

ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಏಡನ್ ಮರ್ಕರಮ್ ಅವರನ್ನು ಸ್ಟಂಪಿಂಗ್ ಮಾಡಿದ ಅವರು ಈ ಮೈಲುಗಲ್ಲು ತಲುಪಿದರು.

ದೋನಿ 315 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಶ್ರೀಲಂಕಾದ ಹಿರಿಯ ಆಟಗಾರ ಕುಮಾರ ಸಂಗಕ್ಕಾರ 482 ವಿಕೆಟ್ ಪಡೆದಿರುವುದು ದಾಖಲೆಯಾಗಿದೆ. ಆ್ಯಡಂ ಗಿಲ್‌ಕ್ರಿಸ್ಟ್ (472) ಮತ್ತು ಮಾರ್ಕ್‌ ಬೌಷರ್ (424) ಅವರು ಕೂಡ ಈ ಸಾಧನೆ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry