ಶಿರಹಟ್ಟಿ ಸ್ವಾಮೀಜಿ ಅಡ್ಡಪಲ್ಲಕ್ಕಿ ಉತ್ಸವ

7

ಶಿರಹಟ್ಟಿ ಸ್ವಾಮೀಜಿ ಅಡ್ಡಪಲ್ಲಕ್ಕಿ ಉತ್ಸವ

Published:
Updated:

ಶಿಗ್ಗಾವಿ: ತಾಲ್ಲೂಕಿನ ಬಂಕಾಪುರದಲ್ಲಿ ಗುರುವಾರ ಶಿರಹಟ್ಟಿ ಸಂಸ್ಥಾನಮಠದ ಫಕ್ಕೀರಸಿದ್ಧರಾಮ ಸ್ವಾಮೀಜಿಗಳ ಅಡ್ಡಪಲ್ಲಕ್ಕಿ ಮಹೋತ್ಸವ  ಭಕ್ತರ ಸಮ್ಮುಖದಲ್ಲಿ ಸಡಗರ, ಸಂಭ್ರಮದಿಂದ ನಡೆಯಿತು.

ಬೆಳಿಗ್ಗೆ ಇಲ್ಲಿನ ಫಕ್ಕಿರೇಶ್ವರ ಮಠದಿಂದ ಆರಂಭವಾದ ಅಡ್ಡಪಲ್ಲಕ್ಕಿ ಮಹೋತ್ಸವದ ಭವ್ಯಮೆರವಣಿಗೆ ಸಾನ್ನಿಧ್ಯವನ್ನು ಅಳೆಲೆಮಠದ ರೇವಣಸಿದ್ಧೇಶ್ವರ ಸ್ವಾಮೀಜಿ ವಹಿಸಿದ್ದರು. ಪಟ್ಟಣದ ಸಹಬಜಾರ್‌, ಪೇಟೆ ಮುಖ್ಯ ರಸ್ತೆ, ನಾಡ ಕಚೇರಿ ಓಣಿ, ರಾಯಚೂರ ಓಣಿ, ಕೊಟ್ಟಿಗೇರಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಉತ್ಸವದ ನಿಮಿತ್ತ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ‘ಮೆರವಣಿಗೆಯ ರಸ್ತೆಯನ್ನು ರಂಗೋಲಿ, ಮಾವಿನ ತಳಿರು ತೋರಣ, ಬಾಳೆ ಗಿಡಗಳಿಂದ ಅಲಂಕರಿಸಲಾಗಿತ್ತು. ಮಹಿಳೆಯರು, ಮಕ್ಕಳು ಆರತಿ ಮಾಡಿ, ಅಡ್ಡಪಲ್ಲಕ್ಕಿಗೆ ಪೂಜೆ ಸಲ್ಲಿಸಿದರು.

ಪೂರ್ಣ ಕುಂಭಮೇಳ, ಅಂಬರಕೊಪ್ಪ ಕಲಾವಿದ ತಂಡದಿಂದ ಡೊಳ್ಳು, ಝಾಂಜ್‌ ಮೇಳ, ಕರಡಿ ಕುಣಿತ, ಹೊಸದುರ್ಗದ ಕಲಾವಿದ ಪುರೋಹಿತರಿಂದ ವೀರಗಾಸೆ, ಹುಬ್ಬಳ್ಳಿ ಸುಳ್ಳದ ಕಲಾ ತಂಡದಿಂದ ಜಗ್ಗಲಿ, ಬಳ್ಳಾರಿ ಕಲಾ ತಂಡದವರಿಂದ ನಂದಿಧ್ವಜ, ಕುದರಿ ಕುಣಿತ, ಹಾನಗಲ್ ಕಾವಿದರಿಂದ ರಾಜ ವೈಭದ ಛತ್ರಿಗಳು ಸೇರಿದಂತೆ ರಾಮಕೃಷ್ಣ ಸುಗಂಧಿ ಸಹೋದರರ ತಂಡದ ನೇತೃತ್ವದಲ್ಲಿ ಸುಮಾರು ಹತ್ತಕ್ಕೂ ಹೆಚ್ಚಿನ ಜಾನಪದ ಕಲಾ ತಂಡಗಳ ವಾದ್ಯ ವೈಭವವು ಮೆರವಣಿಗೆಗೆ ಮೆರಗು ತಂದಿತು. ಭಕ್ತರಿಗೆ, ಪೂರ್ಣಕುಂಭ ಹೊತ್ತವರಿಗೆ ಹಾಗೂ ಕಲಾವಿದರಿಗೆ ಅಲ್ಲಲ್ಲಿ ಉಪಹಾರ, ತಂಪುಪಾನಿಯ, ನೀರು, ಮಜ್ಜಿಗೆ ವಿತರಿಸುವ ವ್ಯವಸ್ಥೆ ಮಾಡಲಾ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry