ಶುಕ್ರವಾರ, ಡಿಸೆಂಬರ್ 13, 2019
27 °C

ಅಂದಿನ ಹಿಟ್‌ ಹಾಡು ಜಾಕ್ವೆಲಿನ್‌ ಹೆಜ್ಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂದಿನ ಹಿಟ್‌ ಹಾಡು ಜಾಕ್ವೆಲಿನ್‌ ಹೆಜ್ಜೆ

ಚೆಲುವೆ ಮಾಧುರಿ ದೀಕ್ಷಿತ್‌ ಅಭಿನಯದ ‘ತೇಜಾಬ್‌’ ಸಿನಿಮಾದ ‘ಏಕ್‌ ದೋ ತೀನ್‌’ ಹಾಡು ದಶಕಗಳೇ ಕಳೆದಿದ್ದರೂ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಇದೀಗ ‘ಬಾಗಿ 2’ ಚಿತ್ರದಲ್ಲಿ ಇದೇ ಹಾಡಿಗೆ ಜಾಕ್ವೆಲಿನ್‌ ಫರ್ನಾಂಡಿಸ್‌ ಹೆಜ್ಜೆ ಹಾಕಿ ನೋಡುಗರ ಮನಸಿಗೆ ಮುದ ನೀಡಲಿದ್ದಾರೆ.

ಸರೋಜ್‌ ಖಾನ್‌ ಈ ಹಾಡಿಗೆ ಮೊದಲು ನೃತ್ಯ ಸಂಯೋಜನೆ ಮಾಡಿದ್ದರು. ‘ಬಾಗಿ 2’ ಚಿತ್ರದಲ್ಲಿನ ಈ ಹಾಡಿಗೆ ಗಣೇಶ್‌ ಎನ್ನುವವರು ನೃತ್ಯ ಸಂಯೋಜನೆ ಮಾಡಲಿದ್ದಾರೆ. ವಿಶೇಷ ಎಂದರೆ ಮಾಧುರಿ ದೀಕ್ಷಿತ್‌ ಜೊತೆ ನೃತ್ಯ ಮಾಡಿದ ಸಹ ಕಲಾವಿದರಲ್ಲಿ ಗಣೇಶ್‌ ಕೂಡ ಒಬ್ಬರಾಗಿದ್ದರು. ‘ಬಾಗಿ 2’ ನಿರ್ದೇಶಕ ಅಹ್ಮದ್‌ ಖಾನ್‌, ಸರೋಜ್‌ ಖಾನ್‌ ಅವರ ಸಹಾಯಕರಾಗಿ ‘ತೇಜಾಬ್‌’ ಚಿತ್ರಕ್ಕೆ ಕೆಲಸ ಮಾಡಿದ್ದರು ಎನ್ನುವುದು ವಿಶೇಷ.

ಈ ಕುರಿತು ಮಾತನಾಡಿರುವ ಅಹ್ಮದ್‌ ಖಾನ್‌ ‘ಈ ಹಾಡು ಎಂದೆಂದಿಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಹಾಡಿನ ಸಂಪೂರ್ಣ ಜವಾಬ್ದಾರಿಯನ್ನು ಮೂವರು ಸಂಯೋಜಕರು ವಹಿಸಿಕೊಂಡಿದ್ದಾರೆ. ಸರೋಜ್‌ ಖಾನ್‌ ಅವರು ಸಂಯೋಜಿಸಿದ್ದ ನೃತ್ಯದ ಹೆಜ್ಜೆಗಳನ್ನು ಪ್ರತಿನಿಧಿಸುವಂಥ ಸ್ಟೆಪ್‌ಗಳನ್ನು ಗಣೇಶ್‌ ಪೋಣಿಸಲಿದ್ದಾರೆ. ವಿನ್ಯಾಸಕ ಮನೀಶ್‌ ಮಲ್ಹೋತ್ರಾ ಕೂಡ ಮಾಧುರಿ ದೀಕ್ಷಿತ್‌ ಧರಿಸಿದ್ದಂಥ ಗುಲಾಬಿ ಬಣ್ಣದ ದಿರಿಸನ್ನೇ ಮನಸಿನಲ್ಲಿಟ್ಟುಕೊಂಡು ವಿನ್ಯಾಸ ಮಾಡಲಿದ್ದಾರೆ. ಈ ಹಾಡೂ ಮೊದಲಿನಷ್ಟೇ ಜನಪ್ರಿಯತೆ ಗಳಿಸಬೇಕು ಎನ್ನುವುದು ನನ್ನ ಆಸೆ’ ಎಂದಿದ್ದಾರೆ.

ಟೈಗರ್‌ಶ್ರಾಫ್‌ ಮತ್ತು ದಿಶಾ ಪಟಾನಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)