ಮಂಗಳವಾರ, ಡಿಸೆಂಬರ್ 10, 2019
20 °C

ಕನಸು ಬಿತ್ತುವ ಕೋಚ್

Published:
Updated:
ಕನಸು ಬಿತ್ತುವ ಕೋಚ್

ಅಕ್ಷಯ್‌ಕುಮಾರ್ ಅಭಿನಯದ ‘ಪ್ಯಾಡ್‌ಮನ್’ ಬಾಕ್ಸ್‌ಆಫೀಸಿನಲ್ಲಿ ಸದ್ದು ಮಾಡುತ್ತಿದ್ದರೆ, ಇನ್ನೊಂದೆಡೆ ಅಭಿಮಾನಿಗಳ ನೆಚ್ಚಿನ ‘ಅಕ್ಕಿ’ ಹಾಕಿ ಕೋಚ್ ಆಗಿ ಮಿಂಚಿರುವ ‘ಗೋಲ್ಡ್’ ಚಿತ್ರದ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿದೆ.

ಒಂದು ನಿಮಿಷದ ಟೀಸರ್‌ನಲ್ಲಿ ಒಲಿಂಪಿಕ್‍ನಲ್ಲಿ ಚಿನ್ನದ ಪದಕ ಗೆಲ್ಲುವ ಹಾಕಿ ತಂಡದ ಕೋಚ್ ಆಗಿ ಅಕ್ಷಯ್‌ ಮಿಂಚಿದ್ದಾರೆ. ಬ್ರಿಟಿಷ್ ದಾಸ್ಯದ ಭಾರತವನ್ನು ಪ್ರತಿನಿಧಿಸುತ್ತಿದ್ದ ಹಾಕಿ ತಂಡವು, 1946ರ ಒಲಿಂಪಿಕ್ಸ್‌ನಲ್ಲಿ ಸ್ವತಂತ್ರ ತಂಡವಾಗಿ ಚಿನ್ನದ ಪದಕ ಗೆದ್ದ ಯಶೋಗಾಥೆಯ ಎಳೆಯನ್ನು ಚಿತ್ರಕತೆ ಒಳಗೊಂಡಿದೆ.

ಟೀಸರ್‌ನಲ್ಲಿ ಅಕ್ಷಯ್ ಒಂದೇ ಉಸಿರಿನಲ್ಲಿ ಹೇಳುವ ಕೆಲವು ಪಂಚ್ ಡೈಲಾಗ್‍ಗಳಿವೆ.

‘ಬ್ರಿಟಿಷ್ ದಾಸ್ಯದ ಭಾರತಕ್ಕೆ 3 ಚಿನ್ನ ಗೆದ್ದುಕೊಟ್ಟಿದ್ದೇವೆ. ಸ್ವತಂತ್ರ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದೇ ಗೆಲ್ಲುತ್ತೇವೆ’. ‘ಇಲ್ಲಿಯವರೆಗೂ ಭಾರತ ಮೌನವಾಗಿತ್ತು, ಮುಂದೆ ಭಾರತ ಮಾತನಾಡುತ್ತದೆ, ವಿಶ್ವ ಸುಮ್ಮನೆ ಕೇಳುತ್ತದೆ...’ ಡೈಲಾಗ್‌ಗಳು ಅಭಿಮಾನಿಗಳಿಗೆ ಇಷ್ಟವಾಗಿದೆ.

‘ರುಸ್ತುಂ’ ಚಿತ್ರದಲ್ಲಿ ಅಭಿನಯಿಸಿದ್ದ ಅಕ್ಷಯ್ ‘ಗೋಲ್ಡ್’ ಚಿತ್ರದಲ್ಲಿ ಅದೇ ಶೈಲಿಯಲ್ಲಿ ಕಾಣುತ್ತಾರೆ. ಟೀಸರ್‌ನಲ್ಲಿ ಒಂದು ಸನ್ನಿವೇಶದಲ್ಲಿ ಪಾಕಿಸ್ತಾನದ ಹಾಕಿತಂಡವನ್ನು ತೋರಿಸಿರುವುದು ವೀಕ್ಷಕನಲ್ಲಿ ಕುತೂಹಲ ಮೂಡಿಸುತ್ತದೆ.

ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್‍, ‘ಗೋಲ್ಡ್ ಚಿತ್ರದಲ್ಲಿ ಅಭಿನಯಿಸಿರುವ ಹಾಕಿ ಆಟಗಾರರಿಗೆ ತರಬೇತಿ ನೀಡಿದ್ದಾರೆ. ಅಮೀರ್ ಖಾನ್ ಅಭಿನಯದ ‘ತಲಾಷ್’ ಚಿತ್ರದ ನಿರ್ದೇಶಕ ರೀಮಾ ಕಗ್ತಿ ಅವರೇ ಈ ಚಿತ್ರಕ್ಕೂ ಆ್ಯಕ್ಷನ್–ಕಟ್ ಹೇಳಿದ್ದಾರೆ. ಹಿಂದಿ ಕಿರುತೆರೆಯ ‘ನಾಗಿನ್’ ಖ್ಯಾತಿಯ ಮೌನಿ ರಾಯ್‌ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಅಕ್ಕಿ ಜತೆ ನಟಿಸಿದ್ದಾರೆ. ‘ಗೋಲ್ಡ್’ ಚಿತ್ರವು ಆಗಸ್ಟ್ 15ರಂದು ತೆರೆ ಕಾಣಲಿದೆ.

ಪ್ರತಿಕ್ರಿಯಿಸಿ (+)