ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ, 10–2–1968

Last Updated 9 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ರಾಷ್ಟ್ರಗಳ ಸುಭದ್ರತೆಗೆ ಶಸ್ತ್ರಾಸ್ತ್ರ ಸಹಾಯಕವಲ್ಲ

ನವದೆಹಲಿ, ಫೆ. 9– ಅಂತರರಾಷ್ಟ್ರ ಸುಭದ್ರತೆಗೆ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯೇ ಮುಖ್ಯವಾದ ಅಂಶ. ಶಸ್ತ್ರಾಸ್ತ್ರಗಳು ಮತ್ತು ಸಶಸ್ತ್ರ ಪಡೆಗಳು ಎಷ್ಟೇ ಶಕ್ತಿಶಾಲಿಯಾಗಿರಲಿ ಅವು ಸುಭದ್ರತೆಗೆ ಸಹಾಯಕವಲ್ಲ  ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಉ ಥಾಂಟ್ ಇಂದು ಇಲ್ಲಿ ಹೇಳಿದರು.

ಸಂಸತ್ತಿನಲ್ಲಿ ರಾಷ್ಟ್ರಪತಿ ಭಾಷಣ ಬಹಿಷ್ಕಾರಕ್ಕೆ ಯತ್ನ

ನವದೆಹಲಿ, ಫೆ. 9– ಸಂಸತ್ತಿನಲ್ಲಿ ಬಲ ಕಮ್ಯುನಿಸ್ಟ್ ತಂಡವು ಸೋಮವಾರ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾಡಲಿರುವ ಭಾಷಣವನ್ನು ಬಹಿಷ್ಕರಿಸಲು ಯೋಚಿಸಿದೆ.

ಅಧಿಕಾರಾರೂಢ ಕಾಂಗ್ರೆಸ್ ಪಕ್ಷವು ಸಂಯುಕ್ತರಂಗದ ಸರ್ಕಾರಗಳನ್ನು ಉರುಳಿಸುವುದರ ಮೂಲಕ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಶಿಥಿಲಗೊಳಿಸುತ್ತಿದೆಯೆಂಬುದು ರಾಷ್ಟ್ರಪತಿಗಳ ಭಾಷಣವನ್ನು ಬಹಿಷ್ಕರಿಸುವುದಕ್ಕೆ ಅದು ಕೊಟ್ಟಿರುವ ಕಾರಣ.

ಅಸ್ಸಾಂನಲ್ಲಿ ರಾಷ್ಟ್ರಪತಿ ಆಡಳಿತ?

ನವದೆಹಲಿ, ಫೆ. 9– ಅಸ್ಸಾಮಿನಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ತೀವ್ರವಾಗಿ ಪರಿಶೀಲಿಸುತ್ತಿದೆ.

ಗಣರಾಜ್ಯೋತ್ಸವದಂದು ಗೌಹಾಟಿಯಲ್ಲಿ ನಡೆದ ಲೂಟಿ ಹಾಗೂ ಬೆಂಕಿಯ ಪ್ರಕರಣಗಳ ಬಗ್ಗೆ ಅಸ್ಸಾಂ ಸರ್ಕಾರ ನೀಡಿದ ವಿವರಣೆ ಕೇಂದ್ರಕ್ಕೆ ಸಮಾಧಾನವನ್ನು ಉಂಟು ಮಾಡಿಲ್ಲ. ಅಲ್ಲಿ ಮಾಮೂಲು ಪರಿಸ್ಥಿತಿಯನ್ನು ಉಂಟು ಮಾಡಲು  ರಾಷ್ಟ್ರಪತಿ ಆಡಳಿತವೇ ಸೂಕ್ತವೆಂದು ಕೇಂದ್ರವು ಭಾವಿಸಿದಂತೆ ತೋರುತ್ತಿದೆ.

–ಪ್ರಜಾವಾಣಿ ಪ್ರತಿನಿಧಿಯಿಂದ

**

98 ಜನರಿದ್ದ ಐ.ಎ.ಎಫ್. ವಿಮಾನದ ಪತ್ತೆ ಅಸಂಭವ

ನವದೆಹಲಿ, ಫೆ. 9– ಕಳೆದ ಬುಧವಾರದಿಂದಲೂ ನಾಪತ್ತೆಯಾಗಿರುವ ‘ಐ.ಎ.ಎಫ್.’ ವಿಮಾನವು ಇಂದಿನವರೆಗೂ ಸಿಕ್ಕಿಲ್ಲ ಎಂದು ರಕ್ಷಣಾ ಶಾಖೆ ಪ್ರಕಟಿಸಿದೆ.

ಈ ವಿಮಾನದ ಸುರಕ್ಷತೆ ಬಗ್ಗೆ ಹೆಚ್ಚು ಆಸೆ ಇಲ್ಲ ಎಂದು ವರದಿಯಾಗಿದೆ.

**

ಪತ್ರಕರ್ತರ ವೇತನ ಅಜ್ಞೆ ವಿರುದ್ಧ ರಿಟ್

ನವದೆಹಲಿ, ಫೆ. 9– ಕಾರ್ಯನಿರತ ಪತ್ರಕರ್ತರ ವೇತನ ಮಂಡಲಿ ಶಿಫಾರಸುಗಳನ್ನು ಕಾರ್ಯಗತಗೊಳಿಸುವಂತೆ ಕೇಂದ್ರ ಸರಕಾರ ಆ. 27 ರಂದು ಮಾಡಿದ ಆಜ್ಞೆಯನ್ನು ರದ್ದುಪಡಿಸುವಂತೆ ಆದೇಶ ಕೊಡಬೇಕೆಂದು ನ್ಯಾಷನಲ್ ಹೆರಾಲ್ಡ್ (ಲಖನೌ), ಕೌಮಿ ಆವಾಜ್, ನವಜೀವನ್ ಪತ್ರಿಕೆಗಳ ಪ್ರಕಾಶಕರಾದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಹಾಗೂ ಭಾರತೀಯ ಮತ್ತು ಪೌರ್ವಾತ್ಯ ವೃತ್ತ ಪತ್ರಿಕೆಗಳ ಸೊಸೈಟಿ (ಐ.ಇ.ಎನ್.ಎಸ್.) ದೆಹಲಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT