ಕಾವೇರಿ ಕಣಿವೆಯಲ್ಲಿ ಗುಡುಗು ಸಹಿತ ಮಳೆ

7

ಕಾವೇರಿ ಕಣಿವೆಯಲ್ಲಿ ಗುಡುಗು ಸಹಿತ ಮಳೆ

Published:
Updated:

ಮೈಸೂರು: ಕಾವೇರಿ ಕಣಿವೆಯ ಐದು ಜಿಲ್ಲೆಗಳಲ್ಲಿ ಶುಕ್ರವಾರ ಗುಡುಗು ಸಹಿತ ಸಾಧಾರಣ ಮಳೆ ಸುರಿಯಿತು. ಅಕಾಲಿಕವಾಗಿ ಬಂದ ವರ್ಷಧಾರೆ ಇಳೆಯನ್ನು ತಂಪಾಗಿಸಿತು.

ಮೈಸೂರು, ಮಂಡ್ಯ, ಹಾಸನ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಮಧ್ಯಾಹ್ನದ ಬಳಿಕ ಮಳೆಯಾಗಿದೆ. ನಾಗರಹೊಳೆ ಹಾಗೂ ಬಂಡಿಪುರ ರಾಷ್ಟ್ರೀಯ ಉದ್ಯಾನದಲ್ಲಿ ಅರ್ಧ ಗಂಟೆ ಬಿರುಸಿನಿಂದ ಸುರಿದಿದೆ. ಕಾಳ್ಗಿಚ್ಚು ಆತಂಕದಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಯಲ್ಲಿ ಇದು ಹರ್ಷ ಮೂಡಿಸಿದೆ.

ಕೊಡಗು ಜಿಲ್ಲೆಯ ಗೊಣಿಕೊಪ್ಪಲು, ವೀರಾಜಪೇಟೆ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಹಾಗೂ ಹಾಸನದ ಕೊಣನೂರು ಮತ್ತು ರಾಮನಾಥಪುರ

ದಲ್ಲಿ ತುಂತುರು ಮಳೆಯಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಮೈಸೂರು ನಗರ, ಹುಣಸೂರು, ಪಿರಿಯಾಪಟ್ಟಣದಲ್ಲಿ ಸಾಧಾರಣ ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry