ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಪಟುಗಳ ಪಿಂಚಣಿ ದ್ವಿಗುಣ

ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಘೋಷಣೆ
Last Updated 9 ಫೆಬ್ರುವರಿ 2018, 19:00 IST
ಅಕ್ಷರ ಗಾತ್ರ

ನವದೆಹಲಿ: ಕ್ರೀಡಾಪಟು ಗಳಿಗೆ ನೀಡುವ ಪಿಂಚಣಿಯನ್ನು ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ ಎಂದು ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ತಿಳಿಸಿದರು.

ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳ ಪಿಂಚಣಿ ನಿಧಿ ಯೋಜನೆಯಡಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರಿಗೆ ಪ್ರತಿ ತಿಂಗಳು ನೀಡುತ್ತಿದ್ದ ₹ 10 ಸಾವಿರ ಮೊತ್ತವನ್ನು ₹ 20 ಸಾವಿರಕ್ಕೆ ಏರಿಸಲಾಗಿದೆ. ವಿಶ್ವಕಪ್ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಚಿನ್ನ ಗೆದ್ದವರಿಗೆ ಪ್ರತಿ ತಿಂಗಳು ₹ 16 ಸಾವಿರ ನೀಡಲಾಗುವುದು. ಕಾಮನ್‌ವೆಲ್ತ್‌ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದವರು ₹ 14 ಸಾವಿರ ಪಡೆದುಕೊಳ್ಳಲಿದ್ದಾರೆ.

‘ಈ ಬಾರಿ ಒಟ್ಟು 220 ಅಥ್ಲೀಟ್‌ಗಳನ್ನು ಟಾಪ್‌ (ಟಾರ್ಗೆಟ್ ಒಲಿಂಪಿಕ್ ಪೋಡಿಯಂ) ಯೋಜನೆಯಡಿ ಆರಿಸಾಗಿದೆ. ಅವರಿಗೆ ಪ್ರತಿ ತಿಂಗಳು ತಲಾ ₹ 50 ಸಾವಿರ ಸಿಗಲಿದೆ. ಅವರ ತರಬೇತಿಗೆ ಸರ್ಕಾರ ಪ್ರತ್ಯೇಕವಾಗಿ ಹಣ ವೆಚ್ಚ ಮಾಡುತ್ತಿದೆ’ ಎಂದು ತಿಳಿಸಿದ ಸಚಿವರು 14 ಮಂದಿಗೆ ಹಣ ಸಂದಾಯ ಮಾಡುವುದನ್ನು ಆಧಾರ್‌ ಕಾರ್ಡ್ ಇಲ್ಲದ ಕಾರಣ ತಡೆ ಹಿಡಿಯಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT