ಮಂಗಳವಾರ, ಡಿಸೆಂಬರ್ 10, 2019
20 °C

ತೊಗರಿ ಖರೀದಿ ಕೇಂದ್ರ ಪುನರಾರಂಭ: ಕೃಷ್ಣ ಬೈರೇಗೌಡ

Published:
Updated:
ತೊಗರಿ ಖರೀದಿ ಕೇಂದ್ರ ಪುನರಾರಂಭ: ಕೃಷ್ಣ ಬೈರೇಗೌಡ

ಬೆಂಗಳೂರು: ತೊಗರಿ ಬೇಳೆ ಖರೀದಿ ಕೇಂದ್ರ ಸ್ಥಗಿತಗೊಂಡಿದ್ದರೆ ಒಂದೆರಡು ದಿನಗಳಲ್ಲಿ ಪುನರಾರಂಭ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಗೆ ಶುಕ್ರವಾರ ತಿಳಿಸಿದರು.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಬೇಳೆ ಖರೀದಿಸಲು ಕಲಬುರ್ಗಿ, ರಾಯಚೂರಿನಲ್ಲಿ ಆರಂಭಿಸಲಾಗಿದ್ದ ಖರೀದಿ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ದೂರಿದರು.

‘ಕೇಂದ್ರ ಸ್ಥಗಿತಗೊಳಿಸಿರುವ ಬಗ್ಗೆ ಗೊತ್ತಿಲ್ಲ. ಕೃಷಿ ಮಾರುಕಟ್ಟೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಈಗಲೇ ಆರಂಭ ಮಾಡಲು ಕಷ್ಟ. ಒಂದೆರಡು ದಿನ ಬೇಕಾಗಬಹುದು. ಆತಂಕ ಬೇಡ’ ಎಂದು ಕೃಷ್ಣ ಬೈರೇಗೌಡ ಭರವಸೆ ನೀಡಿದರು.

ಪ್ರತಿಕ್ರಿಯಿಸಿ (+)