ದೊಡ್ಡ ಮೊತ್ತದ ವಹಿವಾಟಿನ ಮಾಹಿತಿ ಕೊಡದಿದ್ದರೆ ದಂಡ

7

ದೊಡ್ಡ ಮೊತ್ತದ ವಹಿವಾಟಿನ ಮಾಹಿತಿ ಕೊಡದಿದ್ದರೆ ದಂಡ

Published:
Updated:
ದೊಡ್ಡ ಮೊತ್ತದ ವಹಿವಾಟಿನ ಮಾಹಿತಿ ಕೊಡದಿದ್ದರೆ ದಂಡ

ನವದೆಹಲಿ: ಕಳೆದ ಒಂದು ವರ್ಷದಲ್ಲಿ ಬ್ಯಾಂಕ್‌ ಖಾತೆಗೆ ದೊಡ್ಡ ಮೊತ್ತದ ಹಣ ಜಮೆ ಮಾಡಿದ್ದರೆ ಅಥವಾ ದೊಡ್ಡ ವಹಿವಾಟು ನಡೆಸಿದ್ದರೆ ಅದರ ಮಾಹಿತಿ ನೀಡುವಂತೆ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ. ಮಾಹಿತಿ ನೀಡದಿದ್ದರೆ ಅಂತಹವರ ವಿರುದ್ಧ ತನಿಖೆ ನಡೆಸಿ ದಂಡ ವಿಧಿಸಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

ಇಂತಹ ಮಾಹಿತಿ ಸಲ್ಲಿಕೆಗೆ ಮಾರ್ಚ್‌ 31 ಕೊನೆಯ ದಿನ ಎಂದು ಇಲಾಖೆಯು ಪತ್ರಿಕೆಗಳಲ್ಲಿ ಜಾಹೀರಾತನ್ನೂ ನೀಡಿದೆ.

ವಿನಾಯಿತಿಗಳ ಲೆಕ್ಕಾಚಾರಕ್ಕೆ ಮೊದಲು ತೆರಿಗೆ ವ್ಯಾಪ್ತಿಗೆ ಬರುವವರೂ ಈ ಮಾಹಿತಿಯನ್ನು ಸಲ್ಲಿಸಬೇಕು. ವ್ಯಕ್ತಿಗಳು, ಹಿಂದೂ ಅವಿಭಕ್ತ ಕುಟಂಬಗಳು, ಕಂಪನಿಗಳು, ಟ್ರಸ್ಟ್‌ಗಳು, ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳಿಗೂ ಇದು ಅನ್ವಯ.

ಆದಾಯ ತೆರಿಗೆ ಮಾಹಿತಿ ಸಲ್ಲಿಸಲು ಮಾರ್ಚ್‌ 31 ಕೊನೆಯ ದಿನ ಎಂದು ಇಲಾಖೆಯು ತೆರಿಗೆದಾರರಿಗೆ ನೇರವಾಗಿ ಸಂದೇಶ ಕಳುಹಿಸಿದೆ. ಈ ಗಡುವಿನೊಳಗೆ ರಿಟರ್ನ್ಸ್‌ ಸಲ್ಲಿಸದವರು ಮುಂದೆಂದೂ ಸಲ್ಲಿಸಲು ಸಾಧ್ಯವಾಗುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry