ಶುಕ್ರವಾರ, ಡಿಸೆಂಬರ್ 6, 2019
23 °C

ಆರೋಗ್ಯ ಸೂಚ್ಯಂಕ: ಕರ್ನಾಟಕದ ಸ್ಥಾನ ಕುಸಿತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರೋಗ್ಯ ಸೂಚ್ಯಂಕ: ಕರ್ನಾಟಕದ ಸ್ಥಾನ ಕುಸಿತ!

ನವದೆಹಲಿ: ವಿಶ್ವಬ್ಯಾಂಕ್‌, ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ನೀತಿ ಆಯೋಗ ಜಂಟಿಯಾಗಿ ಶುಕ್ರವಾರ ಬಿಡುಗಡೆ ಮಾಡಿದ 2015–16ನೇ ಸಾಲಿನ ಆರೋಗ್ಯ ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕ 9ನೇ ಸ್ಥಾನಕ್ಕೆ ಕುಸಿದಿದೆ.

ಕರ್ನಾಟಕವು ದಕ್ಷಿಣ ಭಾರತದ ಇತರ ರಾಜ್ಯಗಳಾದ ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ನಂತರದ ಸ್ಥಾನದಲ್ಲಿದೆ.

ಆರನೇ ಕ್ರಮಾಂಕದಲ್ಲಿದ್ದ ಮಹಾರಾಷ್ಟ್ರ ಅದೇ ಸ್ಥಾನ ಉಳಿಸಿಕೊಂಡರೆ, ಆಂಧ್ರ ತನ್ನ ಸ್ಥಾನವನ್ನು ಸ್ವಲ್ಪ ಸುಧಾರಿಸಿಕೊಂಡಿದೆ. ಅದಕ್ಕೂ ಹಿಂದಿನ ಸಾಲಿನಲ್ಲಿ (2014–15) ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕ ಏಳನೇ ಕ್ರಮಾಂಕದಲ್ಲಿತ್ತು.

ಉತ್ತಮ ಆರೋಗ್ಯ ಸೇವಾ ಗುಣಮಟ್ಟ ಇಳಿಮುಖವಗಿರುವ ಆರು ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.

ಆರೋಗ್ಯ ಸೂಚ್ಯಂಕ ಪಟ್ಟಿ

21: 2014–15ನೇ ಸಾಲಿನ ಪಟ್ಟಿಯಲ್ಲಿದ್ದ ರಾಜ್ಯಗಳು

7: ಕರ್ನಾಟಕದ ಸ್ಥಾನ

9: 2015–16ರಲ್ಲಿ ಕರ್ನಾಟಕದ ಸ್ಥಾನ

25: ಸೂಚ್ಯಂಕ ನಿರ್ಧರಿಸಲು ಪರಿಗಣಿಸಲಾದ ಮಾನದಂಡ

**

2015–16ನೇ ಆರೋಗ್ಯ ಸೂಚ್ಯಂಕ ಪಟ್ಟಿ

1 ಕೇರಳ

2 ಪಂಜಾಬ್‌

3 ತಮಿಳುನಾಡು

4 ಗುಜರಾತ್‌

5 ಹಿಮಾಚಲ ಪ್ರದೇಶ

6 ಮಹಾರಾಷ್ಟ್ರ

7 ಜಮ್ಮು–ಕಾಶ್ಮೀರ

8 ಆಂಧ್ರ ಪ್ರದೇಶ

9 ಕರ್ನಾಟಕ

10 ಪಶ್ಚಿಮ ಬಂಗಾಲ

**

ಸೂಚ್ಯಂಕ ಸಿದ್ಧಪಡಿಸಿದ ಸಂಸ್ಥೆಗಳು

* ವಿಶ್ವ ಬ್ಯಾಂಕ್‌

* ನೀತಿ ಆಯೋಗ

* ಕೇಂದ್ರ ಆರೋಗ್ಯ ಸಚಿವಾಲಯ

**

ಮಾನದಂಡಗಳೇನು?

* ನವಜಾತ ಶಿಶುಗಳ ಮರಣ ಪ್ರಮಾಣ

* ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮರಣ ಪ್ರಮಾಣ

* ಮಕ್ಕಳಲ್ಲಿಯ ರೋಗನಿರೋಧಕ ವ್ಯವಸ್ಥೆ

* ಕ್ಷಯ ಮತ್ತು ಎಚ್‌ಐವಿಗೆ ಚಿಕಿತ್ಸಾ ಸೌಲಭ್ಯ

* ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ

* ಜಿಲ್ಲಾ ಮಟ್ಟದಲ್ಲಿ ಹೃದಯ ಆರೋಗ್ಯ ಆರೈಕಾ ವ್ಯವಸ್ಥೆ

* ಸಾರ್ವಜನಿಕ ಆರೋಗ್ಯ ಸೇವೆ ಗುಣಮಟ್ಟ

* ಆರೋಗ್ಯ ಸಂಸ್ಥೆಗಳ ಕಾರ್ಯವೈಖರಿ

**

ಕರ್ನಾಟಕದ ಹಿನ್ನಡೆಗೆ ಕಾರಣ

* ಹೊಸ ಕ್ಷಯ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆಯ ಯಶಸ್ಸಿನ ಪ್ರಮಾಣದಲ್ಲಿ ಕುಸಿತ

* ಕ್ಷಯ ರೋಗಿಗಳನ್ನು ಪತ್ತೆ ಹಚ್ಚುವಲ್ಲಿ ವೈಫಲ್ಯ

ಸಮೀಕ್ಷೆಯ ಪರಿಣಾಮಗಳು

* ಸೂಚ್ಯಂಕ ಆಧರಿಸಿ ರಾಜ್ಯಗಳ ಆರೋಗ್ಯ ಕ್ಷೇತ್ರಕ್ಕೆ ಕೇಂದ್ರದ ಅನುದಾನ

* ಉತ್ತಮ ಪ್ರದರ್ಶನ ತೋರುತ್ತಿರುವ ರಾಜ್ಯಗಳಿಗೆ ರಾಷ್ಟ್ರೀಯ ಆರೋಗ್ಯ ಯೋಜನೆ ಅಡಿ ನೀಡುತ್ತಿರುವ ಅನುದಾನ ಶೇ 10ರಿಂದ ಶೇ 20ಕ್ಕೆ ಏರಿಕೆ

* ಸಣ್ಣ ಮತ್ತು ದೊಡ್ಡ ರಾಜ್ಯಗಳಿಗೆ ಪ್ರತ್ಯೇಕ ಸೂಚ್ಯಂಕ ಪಟ್ಟಿ

* ಸಣ್ಣ ರಾಜ್ಯಗಳ ಪೈಕಿ ಮಿಜೋರಾಂ ಮತ್ತು ಮಣಿಪುರ ಅನುಕ್ರಮವಾಗಿ ಮೊದಲೆರೆಡು ಸ್ಥಾನದಲ್ಲಿ

* ಅತ್ಯಂತ ಕಳಪೆ ಗುಣಮಟ್ಟದ ಆರೋಗ್ಯ ಸೇವೆ ಹೊಂದಿರುವ ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ನಂತಹ ದೊಡ್ಡ ರಾಜ್ಯಗಳಿಗೆ ಸುಧಾರಿಸಲು ಸಾಕಷ್ಟು ಅವಕಾಶ

* ದಕ್ಷಿಣದ ರಾಜ್ಯಗಳ ಎದುರು ಸ್ಥಾನ ಉಳಿಸಿಕೊಳ್ಳಲು ಹೆಣಗಬೇಕಾದ ಸವಾಲು

**

ರಾಜ್ಯಗಳ ಆರೋಗ್ಯ ಸೇವೆಯ ಗುಣಮಟ್ಟ ಸುಧಾರಿಸಲು ಈ ಸೂಚ್ಯಂಕವನ್ನು ವಿಶ್ವಸಂಸ್ಥೆಯ ಆರೋಗ್ಯ ಅನುದಾನದ ಜತೆ ಜೋಡಿಸುವ ಚಿಂತನೆ ನಡೆದಿದೆ

– ಜುನೇದ ಅಹ್ಮದ್‌, ವಿಶ್ವಬ್ಯಾಂಕ್‌ ದೇಶೀಯ ನಿರ್ದೇಶಕ

**

ರಾಜ್ಯಗಳು ತಮ್ಮ ಆರೋಗ್ಯ ಸೇವೆ ಸುಧಾರಣೆಗೆ ಗಮನ ಹರಿಸಲು ಈ ಸೂಚ್ಯಂಕ ನೆರವಾಗಲಿದೆ

– ಅಮಿತಾಭ್‌ ಕಾಂತ್‌, ಸಿಇಒ, ನೀತಿ ಆಯೋಗ

**

ಜಿಲ್ಲಾ ಮಟ್ಟದ ಆಸ್ಪತ್ರೆಗಳ ಗುಣಮಟ್ಟ ಸುಧಾರಿಸಲು ಇದೇ ಮಾನದಂಡ ಅನುಸರಿಸಿ ಆರೋಗ್ಯ ಸೂಚ್ಯಂಕ ಸಿದ್ಧಪಡಿಸಲು ಯೋಚನೆ ಮಾಡುತ್ತಿದ್ದೇವೆ

– ವಿನೋದ್‌ ಪಾಲ್‌, ನೀತಿ ಆಯೋಗದ ಸದಸ್ಯ

ಪ್ರತಿಕ್ರಿಯಿಸಿ (+)