ಬುಧವಾರ, ಡಿಸೆಂಬರ್ 11, 2019
20 °C

ನಾಥು ಲಾ ಮೂಲಕ ಮಾನಸ ಸರೋವರ ಯಾತ್ರೆಗೆ ಅವಕಾಶ

ಪಿಟಿಐ Updated:

ಅಕ್ಷರ ಗಾತ್ರ : | |

ನಾಥು ಲಾ ಮೂಲಕ ಮಾನಸ ಸರೋವರ ಯಾತ್ರೆಗೆ ಅವಕಾಶ

ನವದೆಹಲಿ : ನಾಥು ಲಾ ಮಾರ್ಗದ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಗೆ ಚೀನಾ ಅವಕಾಶ ನೀಡಿದೆ.

‘ಕಳೆದ ಡಿಸೆಂಬರ್‌ನಲ್ಲಿ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರು ಈ ಬಗ್ಗೆ ಚರ್ಚಿಸಿದ್ದರು. ಈಗ ತನ್ನ ನಿರ್ಧಾರದ ಬಗ್ಗೆ ಚೀನಾ ದೃಢಪಡಿಸಿದೆ’ ಎಂದು ವಿದೇಶಾಂಗ ವ್ಯವಹಾರಗಳ  ಖಾತೆ ರಾಜ್ಯ ಸಚಿವ ವಿ. ಕೆ. ಸಿಂಗ್‌ ಅವರು ಶುಕ್ರವಾರ ಲೋಕಸಭೆಗೆ ತಿಳಿಸಿದ್ದಾರೆ.

ಭಾರತ ಹಾಗೂ ಚೀನಾ ಸೇನೆಗಳ ನಡುವೆ ದೋಕಲಾದಲ್ಲಿ ಉಂಟಾದ ಸಂಘರ್ಷದಿಂದಾಗಿ ಕಳೆದ ವರ್ಷ ಈ ಮಾರ್ಗದ ಮೂಲಕ ಯಾತ್ರೆಯನ್ನು ಚೀನಾ ಸ್ಥಗಿತಗೊಳಿಸಿತ್ತು. ನಾಲ್ಕು ತಿಂಗಳ ಈ ಯಾತ್ರೆಯು ಜೂನ್‌ನಿಂದ ಆರಂಭವಾಗಲಿದೆ.

ಪ್ರತಿಕ್ರಿಯಿಸಿ (+)