ವಾದ್ರಾ ಜತೆ ನಂಟು: ಇ.ಡಿಯಿಂದ ಶೋಧ

7

ವಾದ್ರಾ ಜತೆ ನಂಟು: ಇ.ಡಿಯಿಂದ ಶೋಧ

Published:
Updated:
ವಾದ್ರಾ ಜತೆ ನಂಟು: ಇ.ಡಿಯಿಂದ ಶೋಧ

ನವದೆಹಲಿ: ರಾಬರ್ಟ್ ವಾದ್ರಾ ಜತೆ ಸಂಪರ್ಕ ಹೊಂದಿದ್ದಾನೆ ಎನ್ನಲಾದ ಮಹೇಶ್ ನಗರ್ ಎಂಬ ವ್ಯಕ್ತಿಗೆ ಸೇರಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ಶೋಧ ಕಾರ್ಯ ನಡೆಸಿದೆ.

ನಗರ್ ಅವರು ಸ್ಕೈಲೈಟ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಜತೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಈ ಸಂಸ್ಥೆ ವಾದ್ರಾ ಅವರಿಗೆ ಸೇರಿದೆ.

ನಗರ್‌ ಅವರ ಆಪ್ತ ಅಶೋಕ್‌ ಕುಮಾರ್ ಹಾಗೂ ಮತ್ತೊಬ್ಬ ವ್ಯಕ್ತಿ ಜೈಪ್ರಕಾಶ್ ಬಗರ್ವಾ ಅವರನ್ನು ಇ.ಡಿ ಕಳೆದ ಡಿಸೆಂಬರ್‌ನಲ್ಲಿ ಬಂಧಿಸಿತ್ತು. 

ವಾದ್ರಾ ಅವರು ಬೀಕಾನೇರ್ ಭೂ ಹಗರಣದ ಆರೋಪ ಎದುರಿಸುತ್ತಿದ್ದು, ಇದಕ್ಕೆ ಸಂಬಂಧಿಸಿದ ನಾಲ್ಕು ಪ್ರಕರಣಗಳಲ್ಲಿ ನಗರ್ ‘ಅಧಿಕೃತ ಪ್ರತಿನಿಧಿ’ ಎನ್ನಲಾಗಿದೆ. ಕಳೆದ ಏಪ್ರಿಲ್‌ನಲ್ಲಿ ನಗರ್ ಹಾಗೂ ಕುಮಾರ್‌ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಇ.ಡಿ ಶೋಧ ಕಾರ್ಯ ನಡೆಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry