13ರಂದು ಅಹೋರಾತ್ರಿ ರಾಜ್‌ ಗೀತೆಗಳ ಗಾಯನ

7

13ರಂದು ಅಹೋರಾತ್ರಿ ರಾಜ್‌ ಗೀತೆಗಳ ಗಾಯನ

Published:
Updated:

ಬೆಂಗಳೂರು: ಶಿವರಾತ್ರಿ ಅಂಗವಾಗಿ ಇದೇ 13ರಂದು ವರನಟ ರಾಜ್‌ ಕುಮಾರ್‌ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗಾಯಕಿ ಶಮಿತಾ ಮಲ್ನಾಡ್‌ ತಿಳಿಸಿದರು.

ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರ್‌ಪಿಸಿ ಬಡಾವಣೆಯ ಹಂಪಿನಗರ ಕ್ರೀಡಾಂಗಣದಲ್ಲಿ ರಾತ್ರಿ 7 ಗಂಟೆಯಿಂದ ಮುಂಜಾನೆವರೆಗೆ ವಿವಿಧ ಕಾರ್ಯಕ್ರಮ ಗಳು ನಡೆಯಲಿದೆ’ ಎಂದರು.

ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಹಾಗೂ ಗಾಯಕರಾದ ಕುಮಾರ್‌ ಗಂಗೋತ್ರಿ, ಅಭಿನವ್‌, ಅಶ್ವಿನಿ ಅಂಗಡಿ, ರೇಷ್ಮಾ ಹಾಡಲಿದ್ದಾರೆ.

ಹಾಸ್ಯ ಹಾಗೂ ನೃತ್ಯ ಕಾರ್ಯಕ್ರಮಗಳು ಇರಲಿವೆ. ಉಚಿತ ಪಾಸ್‌ ವ್ಯವಸ್ಥೆ ಇರಲಿದೆ ಎಂದು ಶಮಿತಾ ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry