ಶುಕ್ರವಾರ, ಡಿಸೆಂಬರ್ 6, 2019
26 °C

ಅನ್ನದಾನಿ ಮೇಲೆ ಹಲ್ಲೆಗೆ ಮುಂದಾದ ಎಚ್‌.ಡಿ.ಕೆ: ವಿಡಿಯೊ ವೈರಲ್‌

Published:
Updated:
ಅನ್ನದಾನಿ ಮೇಲೆ ಹಲ್ಲೆಗೆ ಮುಂದಾದ ಎಚ್‌.ಡಿ.ಕೆ: ವಿಡಿಯೊ ವೈರಲ್‌

ಮಂಡ್ಯ: ಮಳವಳ್ಳಿ ತಾಲ್ಲೂಕು ಕಿರುಗಾವಲಿನಲ್ಲಿ ಈಚೆಗೆ ನಡೆದ ‘ಕುಮಾರಪರ್ವ’ ಕಾರ್ಯಕ್ರಮದ ವೇಳೆ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಮಾಜಿ ಶಾಸಕ ಡಾ. ಕೆ.ಅನ್ನದಾನಿ ಅವರ ಮೇಲೆ ಹಲ್ಲೆ ನಡೆಸಲು ಮುಂದಾದರು ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಹಲಗೂರಿನಿಂದ ಆರಂಭವಾದ ಕುಮಾರಪರ್ವ ಯಾತ್ರೆ ರಾತ್ರಿ 10.30ಕ್ಕೆ ಕಿರುಗಾವಲು ತಲುಪಿದೆ. ಬಳಿಕ ಕುಮಾರಸ್ವಾಮಿ ವಾಸ್ತವ್ಯಕ್ಕಾಗಿ ಮೈಸೂರಿಗೆ ತೆರಳಲು ಮುಂದಾದಾಗ, ಪಟ್ಟಣದ ಜೆಡಿಎಸ್‌ ಕಚೇರಿ ಉದ್ಘಾಟಿಸುವಂತೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಈಗ ತಡವಾಗಿದೆ ಎಂದು ಕುಮಾರಸ್ವಾಮಿ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆಗ ಮಧ್ಯಪ್ರವೇಶಿಸಿದ ಅನ್ನದಾನಿ ಅವರ ಮೇಲೆ ಸಿಟ್ಟಿಗೆದ್ದ ಅವರು ಕೈ ಎತ್ತಿದಂತೆ ಕಾಣುವ ದೃಶ್ಯಗಳು ವಿಡಿಯೊದಲ್ಲಿವೆ.

‘ಕುಮಾರಸ್ವಾಮಿ ನನ್ನ ಮೇಲೆ ಹಲ್ಲೆ ಮಾಡಿಲ್ಲ’ ಎಂದು ಅನ್ನದಾನಿ ಪ್ರತಿಕ್ರಿಯಿಸಿದ್ದಾರೆ.

ಪ್ರತಿಕ್ರಿಯಿಸಿ (+)