ಸೋಮವಾರ, ಡಿಸೆಂಬರ್ 9, 2019
24 °C

ಸೇನಾ ಶಿಬಿರ ಮೇಲೆ ಉಗ್ರರ ಅಟ್ಟಹಾಸ, ಇಬ್ಬರು ಯೋಧರು ಹುತಾತ್ಮ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸೇನಾ ಶಿಬಿರ ಮೇಲೆ ಉಗ್ರರ ಅಟ್ಟಹಾಸ, ಇಬ್ಬರು ಯೋಧರು ಹುತಾತ್ಮ

ಶ್ರೀನಗರ: ಜಮ್ಮು– ಕಾಶ್ಮೀರದ ಸಂಜ್ವಾನ ವಲಯದಲ್ಲಿರುವ ಸೇನಾ ಶಿಬಿರದ ಮೇಲೆ ಉಗ್ರರು ಶನಿವಾರ ಅಟ್ಟಹಾಸ ಮೆರೆದಿದ್ದು,ಇಬ್ಬರು ಯೋಧರು  ಹುತ್ಮಾತರಾಗಿದ್ದಾರೆ. ಒಬ್ಬ ಹವಾಲ್ದಾರ್ ಹಾಗೂ ಅವರ ಮಗಳು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.

ನಸುಕಿನಲ್ಲಿ ಸುಮಾರು 5 ಗಂಟೆ ವೇಳೆ ಗ್ರೆನೆಡ್‌ ಸೇರಿದಂತೆ ಶಸ್ತ್ರಾಸ್ತ್ರದೊಂದಿಗೆ ಜಮ್ಮು– ಪಠಾಣ್‌ಕೋಟ್ ರಾಷ್ಟ್ರೀಯ ಹೆದ್ದಾರಿ ಬಳಿಯ ಸೇನಾ ಶಿಬಿರದ ಒಳಗೆ ಪ್ರವೇಶಿಸಿದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿ ವೇಳೆ ಒಂದು ಬಂಕರ್‌ಗೆ ಬೆಂಕಿ ಹಚ್ಚಿದ್ದಾರೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಮ್ಮು ಐಜಿಪಿ ಎಸ್‌.ಡಿ ಸಿಂಗ್ ಜಮ್ವಾಲ್ ತಿಳಿಸಿದ್ದಾರೆ.

ಜೈಶೆ–ಇ–ಮಹಮ್ಮದ್ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತಿದೆ. ಸೇನಾ ಶಿಬಿರದೊಳಗೆ ಎಷ್ಟು ಮಂದಿ ಉಗ್ರರು ಅಡಗಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಅಡಗಿರುವ ಉಗ್ರರನ್ನು ಸೆರೆಹಿಡಿಯಲು ಭದ್ರತಾ ಪಡೆಯು ಹೆಲಿಕಾಪ್ಟರ್ ಹಾಗೂ ಡ್ರೋನ್‌ಗಳನ್ನು ಬಳಸಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2006ರಲ್ಲಿ ಇದೇ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ್ದ ದಾಳಿಯಲ್ಲಿ 12 ಯೋಧರು ಹುತಾತ್ಮರಾಗಿದ್ದರು. ಏಳು ಮಂದಿ ಗಾಯಗೊಂಡಿದ್ದರು.

ಪ್ರತಿಕ್ರಿಯಿಸಿ (+)