ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಸಿಎಂ ಸಿದ್ದರಾಮಯ್ಯ ಕೀಳು ಮಟ್ಟದ ರಾಜಕಾರಣಿ’: ಎಚ್.ಡಿ ದೇವೇಗೌಡ

ಇಂತಹ ನೀಚ ಮುಖ್ಯಮಂತ್ರಿಯನ್ನು ಬೆಳೆಸಿರುವುದು ಜೀವನದಲ್ಲಿ ಮಾಡಿದ ಮಹಾ ಅಪರಾಧ
Last Updated 10 ಫೆಬ್ರುವರಿ 2018, 9:19 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೀಳು ಮಟ್ಟದ ರಾಜಕಾರಣಿ. ಇಂತಹ ನೀಚ ಮುಖ್ಯಮಂತ್ರಿಯನ್ನು ಬೆಳೆಸಿರುವುದು ಜೀವನದಲ್ಲಿ ಮಾಡಿದ ಮಹಾ ಅಪರಾಧ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ವಾಗ್ದಾಳಿ ನಡೆಸಿದರು. 

ಕೆಂಗೇರಿ ಉಪನಗರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ದೇವೇಗೌಡ ಅವರು, ಇತ್ತೀಚೆಗೆ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬಲ ಕುಗ್ಗಿದೆ. ಇದನ್ನೇ ನೆಪ ಮಾಡಿಕೊಂಡ ಸಿಎಂ ಕಾಂಗ್ರೆಸ್‌ನಲ್ಲಿ  ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ಈ ಹಿಂದೆ ರಾಜ್ಯದ ಜನರ ಮನ ಗೆಲ್ಲುವ ಸಂದರ್ಭದಲ್ಲಿ ನಿಮಗೆ ಈ ದೇವೇಗೌಡ ಬೇಕಾಗಿದ್ದ. ಈಗ ಮುಖ್ಯಮಂತ್ರಿಯಾದ ಬಳಿಕ ಶ್ರವಣಬೆಳಗೊಳದ ಕಾರ್ಯಕ್ರಮದಲ್ಲಿ ನನಗೇ ಮಾತನಾಡುವುದಕ್ಕೆ ಅವಕಾಶ ಕೊಡಲಿಲ್ಲ.

ರಾಜ್ಯದಲ್ಲಿ ನಿಮ್ಮ ಅಧಿಕಾರ ಎಷ್ಟು ದಿನ ನಡೆಯುತ್ತದೆ, ನಾನು ನೋಡುತ್ತೇನೆ. ನೀವು ರಾಜ್ಯದಲ್ಲಿ ಜನರಿಗಾಗಿ ಯಾವ ಕಾರ್ಯಗಳನ್ನು ಮಾಡಿದ್ದೀರಾ ಎಂಬುವುದನ್ನು ಅಂಕಿ ಅಂಶ ಕೊಟ್ಟು ಮಾತನಾಡುತ್ತೇನೆ. ಖಜಾನೆಯನ್ನು ಲೂಟಿ ಮಾಡ್ತಾ ಇದೀರಾ? ಇನ್ನೇನು ನಿಮ್ಮ ಟೈಂ ಮುಗೀತಾ ಬಂತಲ್ಲಪ್ಪ..

120 ದಿನ ಮಾತ್ರ ತಾನೆ? ಸಿದ್ದರಾಮಯ್ಯ ಕೈ ಎತ್ತಿತ್ತಿ ಭಾಷಣ ಮಾಡುವುದನ್ನ ನಾನೂ ನೋಡಿದ್ದೇನೆ... ನಂಗೆ ಡ್ಯಾನ್ಸ್ ಮಾಡಕ್ಕೆ ಬರುತ್ತೆ...ಏನ್ ನೀವ್ ಒಬ್ಬರೇ ದೊಡ್ಡ ಸತ್ಯವಂತರ ಸಿದ್ದರಾಮಯ್ಯ ಅವರೇ, ಏನ್ ಇವರ ಮನೆ ಪಕ್ಕ ಸತ್ಯ ಹರಿಶ್ಚಂದ್ರ ಹಾದು ಹೋಗಿದ್ದಾರಾ ಎಂದು ಸಿಎಂ ಗೆ ಮಾಜಿ ಪ್ರಧಾನಿ ಚಾಟಿ ಬೀಸಿದರು. 

ಬೆಂಗಳೂರಿನ ಅಭಿವೃದ್ಧಿಗೆ ನಾನು ಮುಖ್ಯಮಂತ್ರಿಯಾಗಿ ಮತ್ತು ಪ್ರದಾನ ಮಂತ್ರಿಯಾಗಿ ಏನು ಕೊಡುಗೆ ಕೊಟ್ಟಿದೀನಿ ಅಂತ ಬಿಡಿ ಬಿಡಿಯಾಗಿ ಹೇಳುತ್ತೇನೆ. 

ಕಾವೇರಿ ನೀರು ತರಲು 1400 ಕೋಟಿ ಮತ್ತು ಕೃಷ್ಣ ನದಿಗೆ 1000 ಕೋಟಿ ಕೊಟ್ಟಿದೀನಿ. ವೀರಪ್ಪ ಮೊಯಿಲಿ ಅವರು ಬಿಟ್ಟು ಹೋಗಿದ್ದು 120 ಕೋಟಿ ಸಾಲ ಅದನ್ನು ತೀರಿಸಿದೆ

ಬೆಂಗಳೂರಿನಲ್ಲಿ ಹೊರ ವರ್ತುಲ ರಸ್ತೆಗಳು, ಮೇಲ್ಸೇತುವೆಗಳು, ಐಟಿ ಬಿಟಿ ಕ್ಷೇತ್ರಕ್ಕೆ ನೆರವು ನೀಡಿದ್ದೇನೆ. ಇದನ್ನೆಲ್ಲಾ ಕೊಟ್ಟಿದ್ದು ಇದೇ ದೇವೇಗೌಡ.

ಈ ರಾಜ್ಯದಲ್ಲಿ ಮತ್ತು ದೇಶದಲ್ಲಿ ಯಾರಾದರೂ ಒಬ್ಬ ಸಾಮಾಜಿಕ ನ್ಯಾಯ ಒದಗಿಸಿದ್ದೇ ಆದಲ್ಲಿ ಅದು ಈ ನಿಮ್ಮ ದೇವೇಗೌಡ. ಎಲ್ಲರಿಗು ನ್ಯಾಯ ಒದಗಿಸಬೇಕೆಂದು ಹಗಲಿರುಳು ದುಡಿದೆ. ಇಂದು ಬೆಂಗಳೂರಿನಲ್ಲಿ ಒಬ್ಬ ಹಿಂದುಳಿದ ಮಹಿಳೆ ಒಬ್ಬರು ಉಪ ಮೇಯರ್ ಆಗಿದ್ದರೆ

ದಯಮಾಡಿ ನಿಮ್ಮಲ್ಲಿ ಒಂದು ಮನವಿ ಮಾಡುತ್ತೇನೆ. ಈ ಬಾರಿ ನಿಮ್ಮ ಮನೆ ಮಗ ಜವರಾಯಿ ಗೌಡನ ಗೆಲ್ಲಿಸಿ ಕೊಡಿ ಕುಮಾರಣ್ಣನಿಗೆ ಶಕ್ತಿ ತುಂಬಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ದೇವೇಗೌಡ ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT