ಬುಧವಾರ, ಡಿಸೆಂಬರ್ 11, 2019
23 °C

ಬಾಗಲಕೋಟೆ: ಕಾರು– ಡಿಸ್ಕವರಿ ಬೈಕ್ ನಡುವೆ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಕಾರು– ಡಿಸ್ಕವರಿ ಬೈಕ್  ನಡುವೆ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು

ಬಾಗಲಕೋಟೆ: ಇಲ್ಲಿನ ಸೀಗಿಕೇರಿ ಕ್ರಾಸ್ ಬಳಿ ಹುಂಡೈ ಕಾರು ಹಾಗೂ ಡಿಸ್ಕವರಿ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. 

ಮೃತರನ್ನು ಬೇವಿನಮಟ್ಟಿ ಗ್ರಾಮದ ನಿಂಗಪ್ಪ ಮಲ್ಲಾಡದ (26), ಬಾಗವ್ವ ಸೊನ್ನದ (55) ಎಂದು ಗುರುತಿಸಲಾಗಿದೆ. ನಿಂಗಪ್ಪ ಮಲ್ಲಾಡದ ಅವರು ಬಾಗಲಕೋಟೆಯ ಸಂಗೊಳ್ಳಿರಾಯಣ್ಣ ಯುವಘರ್ಜನೆ ಸಂಘಟನೆಯ ಅಧ್ಯಕ್ಷ.

ಅಪಘಾತಕ್ಕೀಡಾದ ಹುಂಡೈ ಕಾರು ನವನಗರ ನಿವಾಸಿ ಶ್ರೀನಿವಾಸ್ ಕುಲಕರ್ಣಿ ಎಂಬುವರಿಗೆ ಸೇರಿದೆ. ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .

ಪ್ರತಿಕ್ರಿಯಿಸಿ (+)