ಕಾಡಾನೆಗಳ ದಾಳಿ; ಅಪಾರ ಬೆಳೆ ನಷ್ಟ

7

ಕಾಡಾನೆಗಳ ದಾಳಿ; ಅಪಾರ ಬೆಳೆ ನಷ್ಟ

Published:
Updated:

ಹೆತ್ತೂರು: ಯಸಳೂರು ಹೋಬಳಿಯ ಯಡಕೇರಿ ಗ್ರಾಮದಲ್ಲಿ ಕಾಡಾನೆಗಳು ದಾಳಿ ನಡೆಸಿ ಕಾಫಿ, ಬಾಳೆ, ಅಡಿಕೆ ಹಾಗೂ ಮೆಣಸಿಕಾಯಿ ಬೆಳೆಯನ್ನು ತುಳಿದು ಹಾಕಿವೆ. ಗ್ರಾಮದ ರಘು, ಬಾಲಕೃಷ್ಣ, ರಮೇಶ್ ಎಂಬುವರ ತೋಟದಲ್ಲಿನ ಅಡಿಕೆ, ಬಾಳೆ ತೋಟಕ್ಕೆ ಬುಧವಾರ ಮತ್ತು ಗುರುವಾರ ತಡರಾತ್ರಿ ನುಗ್ಗಿರುವ ಸುಮಾರು 18 ಕಾಡಾನೆಗಳ ಹಿಂಡೊಂದು ದಾಂದಲೆ ನಡೆಸಿ ಅಪಾರ ಪ್ರಮಾಣದ ಬೆಳೆಯನ್ನು ನಾಶ ಮಾಡಿದ್ದು, ಜೊತೆಗೆ ನೀರಾವರಿ ಸೌಲಭ್ಯಕ್ಕಾಗಿ ಇಟ್ಟಿದ್ದ ಪೈಪ್‌ಗಳನ್ನು ಸಹ ತುಳಿದು ಹಾಕಿದೆ.

ದಿನೇಶ್‌ ಎಂಬುವರ ಕಾಫಿ ತೋಟದಲ್ಲೂ ಸಹ ದಾಂದಲೆ ನಡೆಸಿದ ಕಾಡಾನೆಗಳು ತೋಟದಲ್ಲಿದ್ದ ಕಾಳುಮೆಣಸು, ಗೆಣಸು ಹಾಗೂ ಹೊಸದಗಿ ನಾಟಿ ಮಾಡಿದ ಕಾಫಿ ಗಿಡಗಳನ್ನು ತುಳಿದು ಹಾಕಿವೆ. ಆನೆಗಳ ಓಡಾಟದಿಂದ ತೋಟ, ಗದ್ದೆಗಳೂ ಹಾಳಾಗಿವೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry