ಬೆಳೆವಿಮೆ ಪರಿಹಾರ ನೀಡಲು ಆಗ್ರಹ

7

ಬೆಳೆವಿಮೆ ಪರಿಹಾರ ನೀಡಲು ಆಗ್ರಹ

Published:
Updated:

ಹಾನಗಲ್: ‘ಬೆಳೆವಿಮೆ ಪರಿಹಾರ ರೈತರ ಖಾತೆಗೆ ಜಮೆ ಮಾಡಬೇಕು ಎಂದು ಒತ್ತಾಯಿಸಿ ಬಿಜೆಪಿ 8 ಬಾರಿ ಪ್ರತಿಭಟನೆ ಮೂಲಕ ಗಮನ ಸೆಳೆದಿದ್ದರೂ ಸರ್ಕಾರ ರೈತರ ನೆರವಿಗೆ ಧಾವಿಸುತ್ತಿಲ್ಲ’ ಎಂದು ಮಾಜಿ ಸಚಿವ ಸಿ.ಎಂ.ಉದಾಸಿ ಆರೋಪಿಸಿದ್ದಾರೆ.

ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಕಳೆದ ವರ್ಷದ ಭತ್ತದ ಬೆಳೆ ವಿಮಾ ಪರಿಹಾರ ಈತನಕ ರೈತರಿಗೆ ಸಿಕಿಲ್ಲ, ಸರ್ಕಾರದ ವಿಳಂಬ ನೀತಿ ಖಂಡಿಸಿ ಬಿಜೆಪಿಯ ಪ್ರತಿಭಟನೆಗೆ ಆಡಳಿತ ಪಕ್ಷ ಅವಮಾನಗೊಳಿಸುತ್ತಿದೆ. ಪಕ್ಷದ ಕಾರ್ಯಕರ್ತರನ್ನು ಜೈಲಿಗೆ ಅಟ್ಟುತ್ತಿದೆ. ಹತಾಶೆಗೊಂಡ ರೈತರು ಹೋರಾಟ ತೀವ್ರಗೊಳಿಸುವ ಸಂಭವವಿದೆ’ ಎಂದು ಅವರು ಹೇಳಿದರು.

‘ಹತ್ತಿ ಮತ್ತು ಮೆಣಸಿನಕಾಯಿ ಬೆಳೆಗೆ ವಿಮಾ ಪರಿಹಾರ ಮೊತ್ತ ಬಿಡುಗಡೆಗೊಂಡಿದೆ, ಜಿಲ್ಲೆಯ 30 ಸಾವಿರ ರೈತರಿಗೆ ₹ 43.44 ಕೋಟಿ ಪರಿಹಾರ ಬಿಡುಗಡೆಯಾಗಿದೆ. ಈ ಮೊತ್ತ ರೈತರ ಖಾತೆಗೆ ಜಮೆ ಮಾಡಲು ವಿಳಂಬ ಧೋರಣೆ ಅನುಸರಿಸದೇ 15 ದಿನಗಳ ಒಳಗಾಗಿ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು ಆಗ್ರಹಿಸಿದರು.

‘ತಾಲ್ಲೂಕಿನ ಗೊಟಗೋಡಿಕೊಪ್ಪ–ಕುಮಟಾ ರಸ್ತೆಯ 12.50 ಕಿ.ಮೀ ಹೆದ್ದಾರಿ ನಿರ್ಮಾಣಕ್ಕೆ ₹ 8 ಕೋಟಿ ಮತ್ತು ಬ್ಯಾಡಗಿ–ತಿಳವಳ್ಳಿ 20 ಕಿ.ಮೀ ಹೆದ್ದಾರಿ ನಿರ್ಮಾಣಕ್ಕೆ ₹ 10.50 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವುದು ಸಂತಸ ಮೂಡಿಸಿದೆ’ ಎಂದು ಉದಾಸಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry