ಜೈಲಿಗೆ ಹೋಗಿ ಬಂದವರ ಕ್ಷೇತ್ರದಿಂದ ರಾಹುಲ್ ಯಾತ್ರೆ: ಶೋಭಾ ವ್ಯಂಗ್ಯ

7

ಜೈಲಿಗೆ ಹೋಗಿ ಬಂದವರ ಕ್ಷೇತ್ರದಿಂದ ರಾಹುಲ್ ಯಾತ್ರೆ: ಶೋಭಾ ವ್ಯಂಗ್ಯ

Published:
Updated:
ಜೈಲಿಗೆ ಹೋಗಿ ಬಂದವರ ಕ್ಷೇತ್ರದಿಂದ ರಾಹುಲ್ ಯಾತ್ರೆ: ಶೋಭಾ ವ್ಯಂಗ್ಯ

ಉಡುಪಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದವರನ್ನು ಜೈಲಿಗೆ ಹೋಗಿ ಬಂದವರು ಎಂದು ಟೀಕಿಸುತ್ತಿದ್ದರು. ಆದರೆ ಅದೇ ಕ್ಷೇತ್ರವನ್ನೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮಾವೇಶಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು.

ಉಡುಪಿಯಲ್ಲಿ ಮಾತನಾಡಿದ ಶೋಭಾ ಅವರು, ‘ರಾಹುಲ್ ಗಾಂಧಿ ಅವರು ಹಲವು ಬಾರಿ ರಾಜ್ಯಕ್ಕೆ ಬಂದಿದ್ದರೂ ದೇವಸ್ಥಾನಗಳಿಗೆ ಹೋಗಿರಲಿಲ್ಲ. ಆದರೆ ಮುಂದಿನ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ದೇವಾಲಯಗಳಿಗೆ ಹೋಗುತ್ತಿದ್ದಾರೆ’ ಎಂದು ಹೇಳಿದರು.

‘ಸಿಎಂ ಮತಕ್ಕಾಗಿ ಅವರು ಏನು ಬೇಕಾದರೂ ಮಾಡಲು ತಯಾರಿದ್ದಾರೆ. ದೇವರು ಅವರಿಗೆ ಒಳ್ಳೆಯದು ಮಾಡಲಿ. ಮಠ, ಮಂದಿರಗಳನ್ನು ವಶಪಡಿಸಿಕೊಳ್ಳುವ ಮುಖ್ಯಮಂತ್ರಿ ಅವರ ಮಾನಸಿಕತೆಯನ್ನು ಭಗವಂತ ನಾಶ ಮಾಡಲಿ’ ಎಂದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry