ಉತ್ತಮ ರಾಸುಗಳ ರೈತರಿಗೆ ಬಹುಮಾನ

7

ಉತ್ತಮ ರಾಸುಗಳ ರೈತರಿಗೆ ಬಹುಮಾನ

Published:
Updated:

ಶನಿವಾರಸಂತೆ: ಸಮೀಪದ ಗುಡುಗಳಲೆ ಜಾತ್ರಾ ಮೈದಾನದಲ್ಲಿ 16 ದಿನ ನಡೆದ 73ನೇ ಜಯದೇವ ಜಾನುವಾರುಗಳ ಜಾತ್ರಾ ಮಹೋತ್ಸವದಲ್ಲಿ ಪ್ರದರ್ಶನ ಹಾಗೂ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಉತ್ತಮ ರಾಸುಗಳನ್ನು ಆಯ್ಕೆ ಮಾಡಿ ಮುಕ್ತಾಯ ಸಮಾರಂಭದಲ್ಲಿ

ರೈತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಉತ್ತಮ ರಾಸುಗಳ ಬಹುಮಾನ ವಿಜೇತ ರೈತರ ವಿವರ: ಹಾಲುಹಲ್ಲಿನ ಜೋಡಿ ಕರುಗಳ ವಿಭಾಗದಲ್ಲಿ ಮಾದನೂರು ಗ್ರಾಮದ ಪ್ರದೀಪ್ ಪ್ರಥಮ ಹಾಗೂ ಮಗ್ಗೆ ಗ್ರಾಮದ ಶಿವಕುಮಾರ್ ದ್ವಿತೀಯ ಬಹುಮಾನ ಪಡೆದರು.

ಎರಡು ಹಲ್ಲಿನ ಜೋಡಿ ಎತ್ತುಗಳ ವಿಭಾಗದಲ್ಲಿ ಸೀಗೆಮರೂರು ಗ್ರಾಮದ ಕುಮಾರಸ್ವಾಮಿ ಪ್ರಥಮ, ಮೆಣಸ ಗ್ರಾಮದ ಸೋಮಶೇಖರ್ ದ್ವಿತೀಯ, ನಾಲ್ಕು ಹಲ್ಲಿನ ಜೋಡಿ ಎತ್ತುಗಳ ವಿಭಾಗದಲ್ಲಿ ಬಾಳಿಗನಹಳ್ಳಿಯ ನಟರಾಜ್ ಪ್ರಥಮ, ರಾಮನಾಥಪುರದ ರಾಜೇಗೌಡ ದ್ವಿತೀಯ ಬಹುಮಾನ ಪಡೆದರು.

ನಾಲ್ಕು ಹಲ್ಲಿನ ಮಿಶ್ರತಳಿ ಜೋಡಿ ಎತ್ತುಗಳ ವಿಭಾಗದಲ್ಲಿ ಶಿಂಗನಕುಪ್ಪೆಯ ಸತೀಶ್ ಪ್ರಥಮ, ಬಿಟ್ಟಗಾನಹಳ್ಳಿಯ ಗುರು ದ್ವಿತೀಯ ಬಹುಮಾನ, ಆರು ಹಲ್ಲಿನ ಜೋಡಿ ಎತ್ತುಗಳ ವಿಭಾಗದಲ್ಲಿ ಹುಲುಕೋಡು ಗ್ರಾಮದ ಗಣೇಶ್ ಪ್ರಥಮ, ಯಸಳೂರು ಗ್ರಾಮದ ಜವರಯ್ಯ ದ್ವಿತೀಯ ಸ್ಥಾನ ಗಳಿಸಿದರು.

ಬಾಯಿಗೂಡಿದ ಎತ್ತುಗಳ ವಿಭಾಗದಲ್ಲಿ ಮಾದನೂರು ಗ್ರಾಮದ ದಿವಾಕರ್ ಪ್ರಥಮ, ಕೊಳ್ಳಂಗಿಯ ಬಸವೇಶ ದ್ವಿತೀಯ ಬಹುಮಾನ, ಬಾಯಿಗೂಡಿದ ಮಿಶ್ರತಳಿ

ಎತ್ತುಗಳ ವಿಭಾಗದಲ್ಲಿ ಮಾದನೂರಿನ ಮೋಹನ್ ಕುಮಾರ್ ಪ್ರಥಮ, ಬನ್ನಿಗನಹಳ್ಳಿಯ ಪ್ರದೀಪ್ ದ್ವಿತೀಯ ಸ್ಥಾನ ಗಳಿಸಿದರು.

ಬೀಜದ ಹೋರಿ ವಿಭಾಗದಲ್ಲಿ ಚೌಡೇನಹಳ್ಳಿಯ ಗಣೇಶ್ ಪ್ರಥಮ, ತಳಗೂರಿನ ಚಂಗಯ್ಯ ದ್ವಿತೀಯ, ನಾಟಿ ಬೀಜದ ಹೋರಿ ವಿಭಾಗದಲ್ಲಿ ಕೂಗೂರಿನ ಮಿಲನ್ ಪ್ರಥಮ, ಹುಲುಕೋಡು ಗ್ರಾಮದ ಪ್ರಭಾಕರ್ ದ್ವಿತೀಯ ಬಹುಮಾನ ಪಡೆದರು.

ಜೋಡಿ ಕೋಣಗಳ ವಿಭಾಗದಲ್ಲಿ ಹೆಮ್ಮನೆ ಗ್ರಾಮದ ವಿಜಯ ಪ್ರಥಮ, ಬೀಜದ ಕೋಣ ವಿಭಾಗದಲ್ಲಿ ಹುಲುಕೋಡು ಗ್ರಾಮದ ವಿಶ್ವೇಶ್ವರ ಪ್ರಥಮ, ಎಮ್ಮೆಗಳ ವಿಭಾಗದಲ್ಲಿ ಬೆಂಬಳೂರಿನ ಹೂವೇಗೌಡ ಪ್ರಥಮ, ಗೋಪಾಲಪುರದ ಗಿರಿಜಮ್ಮ ದ್ವಿತೀಯ, ಜರ್ಸಿ ಹಸುಗಳ ವಿಭಾಗದಲ್ಲಿ ದೊಡ್ಡಳ್ಳಿಯ ಸುರೇಶ್ ಪ್ರಥಮ, ಗೋಪಾಲಪುರದ ಮಂಜುನಾಥ್ ದ್ವಿತೀಯ, ಜರ್ಸಿ ಹಸು ಮಿಶ್ರತಳಿ ವಿಭಾಗದಲ್ಲಿ ಗುಡುಗಳಲೆಯ ಪ್ರವೀಣ್ ಪ್ರಥಮ, ಹೊಳೆನರಸೀಪುರದ ಮಹೇಶ್ ದ್ವಿತೀಯ, ಎಚ್.ಎಫ್.ಹಸು ವಿಭಾಗದಲ್ಲಿ ದೊಡ್ಡಳ್ಳಿಯ ಜಯಪ್ಪ ಪ್ರಥಮ, ಯಸಳೂರಿನ ಕುಮಾರ್ ದ್ವಿತೀಯ ಸ್ಥಾನ ಪಡೆದರು.

ನಾಟಿ ಹಸು ವಿಭಾಗದಲ್ಲಿ ದೊಡ್ಡಳ್ಳಿಯ ಗುರುಮೂರ್ತಿ ಪ್ರಥಮ, ಯಸಳೂರಿನ ಚೇತನ್ ದ್ವಿತೀಯ, ಮಲೆನಾಡ ಗಿಡ್ಡ ನಾಟಿ ಹಸು ವಿಭಾಗದಲ್ಲಿ ಮಗ್ಗೆಯ ವೀರಣ್ಣಯ್ಯ ಪ್ರಥಮ, ಯಸಳೂರಿನ ಜಾವಿದ್ ದ್ವಿತೀಯ, ಕಡಸುಗಳು ವಿಭಾಗದಲ್ಲಿ ಹುಲುಕೋಡು ಗ್ರಾಮದ ಪರಮೇಶ್ ಪ್ರಥಮ, ಶನಿವಾರಸಂತೆಯ ಪೃಥ್ವಿರಾಜ್ ದ್ವಿತೀಯ ಬಹುಮಾನ ಗಳಿಸಿದರು.

ಉತ್ತಮ ರಾಸುಗಳ ಆಯ್ಕೆ ಸಮಿತಿಯಲ್ಲಿ ಪಶುವೈದ್ಯಾಧಿಕಾರಿಗಳಾದ ಡಾ.ನಾಗರಾಜ್, ಡಾ. ಸಂಜೀವ್ ಕುಮಾರ್, ಡಾ.ಭಾನುಪ್ರಕಾಶ್, ಡಾ.ಶೈಲಜಾ, ಶ್ರೀದೇವ್ ಹಾಗೂ ಸಹಾಯಕ ಮಹಮ್ಮದ್ ಸರ್ವರ್ ಪಾಶ ಕರ್ತವ್ಯ ನಿರ್ವಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry