ಬುಧವಾರ, ಡಿಸೆಂಬರ್ 11, 2019
24 °C

ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್‌ ಗೆದ್ದ ಭಾರತ: ಬ್ಯಾಟಿಂಗ್‌ ಆಯ್ಕೆ

Published:
Updated:
ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್‌ ಗೆದ್ದ ಭಾರತ: ಬ್ಯಾಟಿಂಗ್‌ ಆಯ್ಕೆ

ಜೊಹಾನ್ಸ್‌ಬರ್ಗ್‌: ಇಲ್ಲಿನ ನ್ಯೂ ವಾಂಡರರ್ಸ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಗೆಲುವಿಗಾಗಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ಉಭಯ ತಂಡಗಳು ಹೋರಾಟ ನಡೆಸುತ್ತಿವೆ. ‌

ಶನಿವಾರ ನಡೆಯುತ್ತಿರುವ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ.

ಹ್ಯಾಟ್ರಿಕ್‌ ಜಯದ ಮೂಲಕ ದಾಖಲೆ ಬರೆದ ಭಾರತ ತಂಡ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಸರಣಿ ಜಯದ ದಾಖಲೆ ತನ್ನದಾಗಿಸಿಕೊಳ್ಳಲು ಸಜ್ಜಾಗಿದೆ.

ಆರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಈಗಾಗಲೇ 3–0 ರಲ್ಲಿ ಮುನ್ನಡೆ ಸಾಧಿಸಿದೆ. ಸರಣಿ ಜಯ ಸಾಧಿಸಲು ಭಾರತಕ್ಕೆ ಇಂದಿನ ಪಂದ್ಯ ನಿರ್ಣಾಯಕವಾಗಿದೆ.

ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವೇಗಿಗಳಿಗೆ ಶರಣಾದ ಭಾರತದ ಬ್ಯಾಟ್ಸ್‌ಮನ್‌ಗಳು ಏಕದಿನ ಸರಣಿಯಲ್ಲಿ ತಿರುಗೇಟು ನೀಡಿದ್ದಾರೆ.

ನಾಯಕ ವಿರಾಟ್ ಕೊಹ್ಲಿ ಮೊದಲ ಮತ್ತು ಮೂರನೇ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ನಾಯಕ ಫಾಫ್ ಡುಪ್ಲೆಸಿ ಸೇರಿದಂತೆ ಮೂವರು ಬ್ಯಾಟ್ಸ್‌ಮನ್‌ಗಳ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಆತಿಥೇಯರಿಗೆ ಡಿವಿಲಿಯರ್ಸ್ ತಂಡಕ್ಕೆ ಮರಳಿರುವುದು ಸಮಾಧಾನ ತಂದಿದ್ದು ಶನಿವಾರ ಗೆದ್ದು ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲು ಶ್ರಮಿಸಲಿದೆ.

ಪ್ರತಿಕ್ರಿಯಿಸಿ (+)