ಭಾನುವಾರ, ಡಿಸೆಂಬರ್ 8, 2019
24 °C

ಪಕ್ಷ ಪ್ರಚಾರಕ್ಕೆ ಕರ್ನಾಟಕ ಭೂಪಟ ವಿರೂಪ ಅಕ್ಷಮ್ಯ: ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಕ್ಷ ಪ್ರಚಾರಕ್ಕೆ ಕರ್ನಾಟಕ ಭೂಪಟ ವಿರೂಪ ಅಕ್ಷಮ್ಯ: ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ಗರಂ

ಬೆಂಗಳೂರು: ಕಾಂಗ್ರೆಸ್ ಬಿಡುಗಡೆ ಮಾಡಿರುವ ‘#ನನ್ನಕರ್ನಾಟಕ’‌ದಲ್ಲಿ ರಾಜ್ಯದ ಭೂಪಟವನ್ನು ವಿರೂಪಗೊಳಿಸಲಾಗಿದೆ. ಇದು ಅಕ್ಷಮ್ಯ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದಿದ್ದಾರೆ.

‘ಪಕ್ಷದ ಪ್ರಚಾರಕ್ಕಾಗಿ ರಾಜ್ಯದ ಭೂಪಟವನ್ನೇ ವಿರೂಪಗೊಳಿಸಲಾಗಿದೆ. ಸಿದ್ದರಾಮಯ್ಯನವರೆ ನಿಮಗೆ ಕರ್ನಾಟಕ, ಭೂಪಟ, ಧ್ವಜ ಚುನಾವಣಾ ಪ್ರಚಾರದ ವಸ್ತು ಇರಬಹುದು. ನನಗೆ, ನಾಡಿಗೆ ಇದರ ಬಗ್ಗೆ ಅತೀವ ಭಕ್ತಿ, ಗೌರವವಿದೆ. ಭಾರತದ ಭೂಪಟ ವಿರೂಪಗೊಳಿಸಿದಷ್ಟೇ ಅಕ್ಷಮ್ಯ, ರಾಜ್ಯದ ಭೂಪಟ ವಿರೂಪಗೊಳಿಸುವುದು. ಚುನಾವಣಾ ಪ್ರಚಾರ ಮಾಡಿ, ಸ್ವಾಭಿಮಾನವನ್ನು ಅಡವಿಟ್ಟಲ್ಲ’ ಎಂದು ಯಡಿಯೂರಪ್ಪ ಅವರು ಟ್ವೀಟ್‌ ಮಾಡಿದ್ದಾರೆ.

ಜತೆಗೆ, ಕಾಂಗ್ರೆಸ್ ಭೂಪಟವನ್ನು ವಿರೂಪಗೊಳಿಸಿರುವ ಬಗೆಯನ್ನು ‘ಕಾಂಗ್ರೆಸಿಗರ ಕರ್ನಾಟ’ ಎಂದು ಮತ್ತೊಂದು ಬದಿಯಲ್ಲಿ ‘ಕನ್ನಡಗಿರ ಕರ್ನಾಟಕ’ ಎಂಬ ಬರಹವಿರುವ ಚಿತ್ರವನ್ನೂ ಯಡಿಯೂರಪ್ಪ ಅವರು ಟ್ಯಾಗ್‌ ಮಾಡಿದ್ದಾರೆ.

ಕಾಂಗ್ರೆಸ್ ಯುವ ಜನರಿಗೆ ವೇದಿಕೆ ಒದಗಿಸುವ ಉದ್ದೇಶದಿಂದ #ನನ್ನಕರ್ನಾಟಕವನ್ನು ಬಿಡುಗಡೆ ಮಾಡಿತ್ತು.

ಪ್ರತಿಕ್ರಿಯಿಸಿ (+)