ಶುಕ್ರವಾರ, ಡಿಸೆಂಬರ್ 6, 2019
25 °C

ಪುಟ್ಟ ಒಂದು ಗುಟ್ಟು ಹೇಳಿ

Published:
Updated:
ಪುಟ್ಟ ಒಂದು ಗುಟ್ಟು ಹೇಳಿ

ಪುಟ್ಟ ಒಂದು ಗುಟ್ಟು ಹೇಳಿ

‘ಹೌದಾ?’ ಅಂತ ಕಿಟ್ಟು ಕೇಳಿ

ಗುಸು ಗುಸು ಪಿಸಪಿಸ ನಡೀತಿತ್ತಂತೆ

ಕಿಟ್ಟು ಕೇಳಿ ಸುಮ್ಮ ನಿದ್ನಾ?

ಟಿಂಟೂ ಕಿವೀಲೂದಿಬಿಟ್ನಾ?

ಇಬ್ಬರದ್ದೂ ಗುಸು ಗುಸು ಆಗುತ್ತಿತ್ತಂತೆ

ಟಿಂಟೂ ಹೋದ ಮಿಂಟೂನತ್ತ

‘ಮಿಂಟೂ, ನಿಂಗೆ ವಿಷಯ ಗೊತ್ತಾ...‘

ಟಿಂಟೂ–ಮಿಂಟೂ ಗುಟ್ಟು ಗುಟ್ಟು ನಡೀತಿತ್ತಂತೆ

ಮಿಂಟೂಗೊಬ್ಬ ಗೆಳೆಯನಿದ್ದ

‘ಚಿಂಟೂ, ಇಲ್ಬಾ...’ ಮಿಂಟೂ ಕರ್‍ದ

ಗುಟ್ಟು ಅಲ್ಲಿ ಕಿವಿ ಕಿವಿಗೆ ದಾಟಿ ಹೋಯ್ತಂತೆ

ಅಲ್ಲೇ ನಿಂತಿದ್ನಂತೆ ಛೋಟೂ

‘ಏನೋ?’ ಕೇಳಿದ ಹತ್ತಿರ ಬಂದು

ಅವನ ಕಿವಿಗೂ ಗುಟ್ಟನು ಹಂಚಿ ಬಿಟ್ರಂತೆ!

ಗುಟ್ಟು! ಗುಟ್ಟು! ಎಲ್ಲಿದೆ ಗುಟ್ಟು?

ಹರಡಿ, ಹಂಚಿ ಆಯ್ತೆಡವಟ್ಟು!

ಗುಟ್ಟು ಈಗ ರಟ್ಟು ಆಗಿ ಹೋಗಿಬಿಡ್ತಂತೆ!

ಗುಟ್ಟು ಗುಟ್ಟಾಗಿಡ್ಬೇಕಿತ್ತು, ಆಗಿಲ್ಲವಂತೆ!

ಗುಟ್ಟಿನ ಮುಸುಕು ತೆಗೆದು ಬಯಲು ಮಾಡಿಬಿಟ್ರಂತೆ!

ಪ್ರತಿಕ್ರಿಯಿಸಿ (+)