ಬಿಟ್‌ಕಾಯಿನ್‌: ಶೀಘ್ರದಲ್ಲೇ ನಿಯಮ

7

ಬಿಟ್‌ಕಾಯಿನ್‌: ಶೀಘ್ರದಲ್ಲೇ ನಿಯಮ

Published:
Updated:
ಬಿಟ್‌ಕಾಯಿನ್‌: ಶೀಘ್ರದಲ್ಲೇ ನಿಯಮ

ನವದೆಹಲಿ: ‘ಬಿಟ್‌ಕಾಯಿನ್‌ನಂಥ ಕ್ರಿಪ್ಟೊಕರೆನ್ಸಿಗಳ ವಹಿವಾಟು ನಿಯಂತ್ರಣ ವ್ಯವಸ್ಥೆ ಶೀಘ್ರದಲ್ಲಿಯೇ ಬರಲಿದೆ’ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷ ಅಜಯ್ ತ್ಯಾಗಿ ತಿಳಿಸಿದ್ದಾರೆ.

‘ಬಿಟ್‌ಕಾಯಿನ್‌ ಬೆಲೆಯಲ್ಲಿ ದಿಢೀರನೆ ಭಾರಿ ಏರಿಳಿತ ಆಗುತ್ತಿರುವುದನ್ನು ನಿಯಂತ್ರಿಸಲು ಹಾಗೂ ಹೂಡಿಕೆದಾರರ ಹಿತರಕ್ಷಣೆಯ ಉದ್ದೇಶದಿಂದ ಕ್ರಿಪ್ಟೊಕರೆನ್ಸಿಗಳ ವಹಿವಾಟಿಗೆ ಒಂದು ನಿಯಂತ್ರಣ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಬಜೆಟ್‌ ಮಂಡನೆಯಾದ ನಂತರದ ದಿನವೇ ಒಂದು ಸಭೆ ಕರೆಯುವಂತೆ ಆರ್ಥಿಕ ವ್ಯವಹಾರಗಳ ಸಚಿವಾಲಯಕ್ಕೆ ಮನವಿ ಮಾಡಲಾಗಿತ್ತು. ಈ ರೀತಿಯ ಕರೆನ್ಸಿಗಳ ವಹಿವಾಟಿಗೆ ಸಂಬಂಧಿಸಿದಂತೆ ಮೊದಲಿಗೆ ಒಂದು ನೀತಿ ರೂಪಿಸುವ ಅಗತ್ಯ ಇದೆ. ಯಾವ ಸಮಿತಿಗೆ ಯಾವ ಕೆಲಸ ವಹಿಸಬೇಕು ಎನ್ನುವುದನ್ನು ನಿರ್ಧರಿಸಲಾಗಿದೆ. ಆ ಸಮಿತಿಗಳು ಶೀಘ್ರದಲ್ಲಿಯೇ ನಿಯಂತ್ರಣ ವ್ಯವಸ್ಥೆಯ ರೂಪರೇಷೆಗಳನ್ನು ಸಿದ್ಧಪಡಿಸಿ ನೀಡಲಿವೆ. ಆ ಬಳಿಕ ಸೆಬಿ ತನ್ನ ಪಾತ್ರ ನಿರ್ವಹಿಸಲಿದೆ’ ಎಂದೂ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry