ಸಿಬ್ಬಂದಿ ಪ್ರೋತ್ಸಾಹಕ್ಕೆ ರೈಲ್ವೆ ಹೊಸ ಮಂತ್ರ

7
ಉದ್ಯೋಗಿಗಳ ಕಾರ್ಯಕ್ಷಮತೆ ಹೆಚ್ಚಿಸಲು ಮುಂದಾದ ರೈಲ್ವೆ ಇಲಾಖೆ

ಸಿಬ್ಬಂದಿ ಪ್ರೋತ್ಸಾಹಕ್ಕೆ ರೈಲ್ವೆ ಹೊಸ ಮಂತ್ರ

Published:
Updated:
ಸಿಬ್ಬಂದಿ ಪ್ರೋತ್ಸಾಹಕ್ಕೆ ರೈಲ್ವೆ ಹೊಸ ಮಂತ್ರ

ನವದೆಹಲಿ: ಉದ್ಯೋಗಿಗಳ ಕಾರ್ಯಕ್ಷಮತೆ ಪರಿಶೀಲಿಸಲು ಹೊಸ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ರೈಲ್ವೆ ಇಲಾಖೆ ನೇಮಿಸಿದ್ದ ಸಮಿತಿ ಶಿಫಾರಸು ಮಾಡಿದೆ.

ಹೊಸ ಪರಿಶೀಲನಾ ವ್ಯವಸ್ಥೆ ಜಾರಿಗೆ ತರುವ ಮೂಲಕ ಉದ್ಯೋಗಿಗಳಿಗೆ ಬೋನಸ್‌, ಪ್ರೋತ್ಸಾಹ ಧನ ಹಾಗೂ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸಮಿತಿ ಶಿಫಾರಸು ಮಾಡಿದೆ.

ಅನಧಿಕೃತ ರಜೆ: 13 ಸಾವಿರ ನೌಕಕರ ವಿರುದ್ಧ ಶಿಸ್ತುಕ್ರಮ

ದೀರ್ಘ ಕಾಲದವರೆಗೆ ಅನಧಿಕೃತ ರಜೆ ಹಾಕಿ ಕೆಲಸಕ್ಕೆ ಗೈರು ಹಾಜರಾದ 13,000ಕ್ಕೂ ಹೆಚ್ಚು ನೌಕಕರ ವಿರುದ್ಧ ಶಿಸ್ತುಕ್ರಮ ಜರುಗಿಸಲು ರೈಲ್ವೆ ಇಲಾಖೆ ಮುಂದಾಗಿದೆ.

‘ಸೇವಾ ನಿಯಮಗಳನ್ನು ಅನುಸರಿಸಿ ಈ ನೌಕರರನ್ನು ಸೇವೆಯಿಂದ ವಜಾಗೊಳಿಸಲು ಇಲಾಖೆಯ ಆಯಾ ವಿಭಾಗಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ’ ಎಂದು ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.

₹867 ಕೋಟಿ ದಂಡ ಸಂಗ್ರಹ

2017–18ರ ಆರ್ಥಿಕ ವರ್ಷದ ಮೊದಲ 9 ತಿಂಗಳಲ್ಲಿ (ಡಿಸೆಂಬರ್‌ವರೆಗೆ) ಟಿಕೆಟ್‌ ಪಡೆಯದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ ₹867.36 ಕೋಟಿ ದಂಡ ಸಂಗ್ರಹಿಸಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ರಾಜೇನ್‌ ಗೋಹೆನ್‌ ಅವರು ಹೇಳಿದ್ದಾರೆ.

ಈ ಅವಧಿಯಲ್ಲಿ ಕೈಗೊಂಡ 18.18 ಲಕ್ಷ ತಪಾಸಣೆಗಳಲ್ಲಿ ಟಿಕೆಟ್‌ ಇಲ್ಲದೇ ಅಥವಾ ಅಧಿಕೃತ ಟಿಕೆಟ್‌ ಹೊಂದದ ಸುಮಾರು 1.83 ಕೋಟಿ ಜನರು ಸಿಕ್ಕಿಬಿದ್ದಿದ್ದಾರೆ ಎಂದೂ ಹೇಳಿದ್ದಾರೆ.

ಸಮಿತಿ ಶಿಫಾರಸುಗಳು

* ಒಟ್ಟು ಉದ್ಯೋಗಿಗಳು – 13 ಲಕ್ಷ

* ಉತ್ತಮ ಗೃಹ ಸೌಲಭ್ಯ, ವೈದ್ಯಕೀಯ ಹಾಗೂ ಉಚಿತ ಪ್ರಯಾಣದ ಸೌಲಭ್ಯವನ್ನು ಉದ್ಯೋಗಿಗಳ ಪಾಲಕರಿಗೂ ವಿಸ್ತರಣೆ

* ಉನ್ನತ ಅಧ್ಯಯನ ನಡೆಸುವವರಿಗೆ ಆರ್ಥಿಕ ನೆರವು

* ಕೆಳ ಹಂತದ ನೌಕರರಿಗೆ ಸಿಗುವ ಬೋನಸ್‌ ಅನ್ನು ಗ್ರೂಪ್‌ ’ಎ’ ಹಾಗೂ ಗ್ರೂಪ್‌ ’ಬಿ’ ಶ್ರೇಣಿಯ ಅಧಿಕಾರಿಗಳಿಗೂ ವಿಸ್ತರಣೆ

* 10 ವರ್ಷಗಳ ಕಾಲ ಅಪಘಾತ ರಹಿತ ಸೇವೆ ಪೂರೈಸಿದ ಗ್ಯಾಂಗ್‌ಮೆನ್‌ ಹಾಗೂ ಟ್ತ್ಯಾಕ್‌ಮೆನ್‌ಗಳಿಗೆ ಹಣದ ಬಹುಮಾನ

* ಒಟ್ಟು ಏಳು ವರ್ಷಗಳ ಸೇವೆಯಲ್ಲಿ ಉತ್ತಮ ಕಾರ್ಯಕ್ಷಮತೆಯ ಐದು ವರ್ಷಗಳ ಅವಧಿ ಪರಿಗಣಿಸಿ ಪ್ರೋತ್ಸಾಹ ಧನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry