ಬಹುಮನಿ ಸುಲ್ತಾನರ ಉತ್ಸವಕ್ಕೆ ವಿರೋಧ

7

ಬಹುಮನಿ ಸುಲ್ತಾನರ ಉತ್ಸವಕ್ಕೆ ವಿರೋಧ

Published:
Updated:

ಬೆಂಗಳೂರು: ‘ರಾಜ್ಯ ಸರ್ಕಾರವು ಕಲಬುರ್ಗಿಯಲ್ಲಿ ಮಾರ್ಚ್‌ 6ರಂದು ಬಹುಮನಿ ಸುಲ್ತಾನರ ಉತ್ಸವ ನಡೆಸಲು ಉದ್ದೇಶಿಸಿದೆ. ಇದನ್ನು ಕೈಬಿಡಬೇಕು’ ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಆಗ್ರಹಿಸಿದೆ.

ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೇನೆಯ ಅಧ್ಯಕ್ಷ ಭೀಮಾಶಂಕರ ಪಾಟೀಲ, ‘ಬಹುಮನಿ ಸುಲ್ತಾನರು ಕನ್ನಡಿಗರನ್ನು ಗುಲಾಮರಂತೆ ಕಂಡಿದ್ದರು. ಇತಿಹಾಸ ಅಧ್ಯಯನ ಮಾಡಿದರೆ ಅವರು ಕ್ರೌರ್ಯ ಎಂತಹದ್ದು ಎಂದು ತಿಳಿಯುತ್ತದೆ’ ಎಂದರು.

‘ಕಲಬುರ್ಗಿ ಜಿಲ್ಲೆಗೆ ತನ್ನದೇ ಆದ ಇತಿಹಾಸವಿದೆ. ಅಲ್ಲಿನ ಸಾಹಿತ್ಯ, ಸಂಸ್ಕತಿ ರಕ್ಷಿಸಿದ್ದು ರಾಷ್ಟ್ರಕೂಟರು. ಉತ್ಸವ ನಿಲ್ಲಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry