ಅಮೆರಿಕ ಕ್ಷಿಪಣಿ ಬಳಿಸಿದ ಪಾಕ್‌: ಭಾರತ ಆಕ್ಷೇಪ

7

ಅಮೆರಿಕ ಕ್ಷಿಪಣಿ ಬಳಿಸಿದ ಪಾಕ್‌: ಭಾರತ ಆಕ್ಷೇಪ

Published:
Updated:

ನವದೆಹಲಿ: ಅಮೆರಿಕ ತಯಾರಿಸಿದ ಯುದ್ಧ ಟ್ಯಾಂಕ್‌ ನಿರೋಧಕ ಗುರಿ ನಿರ್ದೇಶಿತ ಕ್ಷಿಪಣಿಗಳನ್ನು(ಎಟಿಜಿಎಂ) ಪಾಕಿಸ್ತಾನ ಸೇನೆ ಜಮ್ಮ ಮತ್ತು ಕಾಶ್ಮೀರ ಗಡಿಯಲ್ಲಿ  ಪ್ರಯೋಗಿಸುತ್ತಿರುವ ವಿಷಯವನ್ನು ಭಾರತವು ಅಮೆರಿಕದ ಗಮನಕ್ಕೆ ತರುವ ಸಾಧ್ಯತೆ ಇದೆ.

ಜಮ್ಮು ಮತ್ತು ಕಾಶ್ಮೀರದ ಅಂತರರಾಷ್ಟ್ರೀಯ ಗಡಿ ರೇಖೆಯಲ್ಲಿ ಪಾಕಿಸ್ತಾನ ಸೇನೆ ಇತ್ತೀಚೆಗೆ ಭಾರತದ ಸೇನೆಯ ಮೇಲೆ ಅಮೆರಿಕದ ಈ ಕ್ಷಿಪಣಿಗಳಿಂದ ಭಾರಿ ಶೆಲ್‌ ದಾಳಿ ನಡೆಸಿದೆ.

ಅಮೆರಿಕ ಮತ್ತು ಭಾರತ ಎಲ್ಲ ಕ್ಷೇತ್ರಗಳಲ್ಲಿ ಭಾಂದವ್ಯ ಗಟ್ಟಿಗೊಳಿಸಲು ಮುಂದಾಗಿರುವ ಈ ಸಂದರ್ಭದಲ್ಲಿ ಪಾಕಿಸ್ತಾನ ಹೊಸದಾಗಿ ಗಡಿಯಲ್ಲಿ ಅಮೆರಿಕದ ಕ್ಷಿಪಣಿಗಳನ್ನು ಬಳಸಲು ಮುಂದಾಗಿದೆ.

ಈ ವಿಷಯವನ್ನು ಅಮೆರಿಕದ ಗಮನಕ್ಕೆ ತರಲು ಭಾರತ ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry