ಸೋಮವಾರ, ಡಿಸೆಂಬರ್ 9, 2019
17 °C

ಗರಿಷ್ಠ ಮೊತ್ತದ ಮಿತಿ ₹ 3000ಕ್ಕೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗರಿಷ್ಠ ಮೊತ್ತದ ಮಿತಿ ₹ 3000ಕ್ಕೆ ಹೆಚ್ಚಳ

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್) ‘ನಮ್ಮ ಮೆಟ್ರೊ’ ಸ್ಮಾರ್ಟ್‌ಕಾರ್ಡ್‌ಗಳಲ್ಲಿ ಗರಿಷ್ಠ ಮೊತ್ತದ ಮಿತಿಯನ್ನು ₹ 3,000ಕ್ಕೆ ಹೆಚ್ಚಿಸಿದೆ. ಶನಿವಾರದಿಂದಲೇ ಇದು ಜಾರಿಗೆ ಬಂದಿದೆ.

ಇದುವರೆಗೆ ಈ ಕಾರ್ಡ್‌ಗಳಲ್ಲಿ ಗರಿಷ್ಠ ₹ 1,500 ಹೊಂದುವುದಕ್ಕೆ ಮಾತ್ರ ಅವಕಾಶವಿತ್ತು. ಮೆಟ್ರೊ ಕಾರಿಡಾರ್‌ನ ತುತ್ತತುದಿಯ ನಿಲ್ದಾಣಗಳ ನಡುವೆ ನಿತ್ಯ ಪ್ರಯಾಣಿಸುವರು ತಿಂಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಸ್ಮಾರ್ಟ್‌ಕಾರ್ಡ್‌ಗೆ ಹಣ ತುಂಬಿಸಬೇಕಾಗುತ್ತಿತ್ತು. ಈ ಸಮಸ್ಯೆ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ನಿಗಮವ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್‌ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)