ನೇರ ತೆರಿಗೆ ಸಂಗ್ರಹ ₹ 6.95 ಲಕ್ಷ ಕೋಟಿ

7

ನೇರ ತೆರಿಗೆ ಸಂಗ್ರಹ ₹ 6.95 ಲಕ್ಷ ಕೋಟಿ

Published:
Updated:

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌–ಜನವರಿ ಅವಧಿಯಲ್ಲಿ ನೇರ ತೆರಿಗೆ ಸಂಗ್ರಹ ₹ 6.95 ಲಕ್ಷ ಕೋಟಿಗೆ ಏರಿಕೆ ಕಂಡಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸಂಗ್ರಹದಲ್ಲಿ ಶೇ 19 ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

2017–18ರಲ್ಲಿ ಪರಿಷ್ಕೃತ ಅಂದಾಜಿನಂತೆ ನೇರ ತೆರಿಗೆ ಮೂಲಕ ₹ 10.05 ಲಕ್ಷ ಕೋಟಿ ಸಂಗ್ರಹವಾಗಲಿದೆ. ಇದರಲ್ಲಿ ಇಲ್ಲಿಯವರೆಗೆ ಸಂಗ್ರಹವಾಗಿರುವ ಪ್ರಮಾಣ ಶೇ 69.2 ರಷ್ಟಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry