ಶುಕ್ರವಾರ, ಡಿಸೆಂಬರ್ 13, 2019
27 °C

ಪೇಟೆಯಲ್ಲಿ ನಕಾರಾತ್ಮಕ ವಹಿವಾಟು

ಪಿಟಿಐ Updated:

ಅಕ್ಷರ ಗಾತ್ರ : | |

ಪೇಟೆಯಲ್ಲಿ ನಕಾರಾತ್ಮಕ ವಹಿವಾಟು

ಮುಂಬೈ: ಜಾಗತಿಕ ಮಾರುಕಟ್ಟೆಯ ಪ್ರಭಾವಕ್ಕೆ ಒಳಗಾಗಿ ದೇಶದ ಷೇರುಪೇಟೆಗಳಲ್ಲಿ  ಸತತ ಎರಡನೇ ವಾರವೂ ಇಳಿಮುಖವಾಗಿ ವಹಿವಾಟು ನಡೆಯಿತು.

ಬಜೆಟ್ ನಿರ್ಧಾರದಿಂದ ತಗ್ಗಿದ್ದ ಷೇರುಪೇಟೆಯ ಉತ್ಸಾಹಕ್ಕೆ ಜಾಗತಿಕ ಮಾರುಕಟ್ಟೆ ಮತ್ತಷ್ಟು ಪೆಟ್ಟು ಕೊಟ್ಟಿತು. ಅಲ್ಲಿ ಸೃಷ್ಟಿಯಾದ ಮಾರಾಟದ ಒತ್ತಡ ದೇಶದ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿದೆ.

ಅಮೆರಿಕದ ಷೇರುಪೇಟೆ ಸೂಚ್ಯಂಕಗಳು ಶುಕ್ರವಾರದ ವಹಿವಾಟಿನಲ್ಲಿ ಉತ್ತಮ ಗಳಿಕೆ ಕಂಡಿವೆ. ಹೀಗಿದ್ದರೂ ವಾರದ ವಹಿವಾಟಿ ನಷ್ಟ ಎರಡು ವರ್ಷಗಳಲ್ಲೆ ಅತಿ ಹೆಚ್ಚಿನ ಮಟ್ಟದ್ದಾಗಿದೆ. ವಿದೇಶಿ ಹೂಡಿಕೆದಾರರು ಖರೀದಿಗೆ ಆದ್ಯತೆ ನೀಡಿದ್ದಾರೆ.

ಆರ್‌ಬಿಐ ನಿರ್ಧಾರ: ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಆದರೆ, ವಿತ್ತೀಯ ಕೊರತೆ ಹೆಚ್ಚಾಗುವ ಆತಂಕದಿಂದ 2017–18ಕ್ಕೆಆರ್ಥಿಕ ಪ್ರಗತಿಯನ್ನು ಶೇ 6.6ಕ್ಕೆ ತಗ್ಗಿಸಲಾಗಿದೆ. ಇದು ಸಹ ಷೇರುಪೇಟೆಯಲ್ಲಿ ಸೂಚ್ಯಂಕವನ್ನು ಇಳಿಕೆ ಕಾಣುವಂತೆ ಮಾಡಿತು.

ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 1061 ಅಂಶ ಕುಸಿತ ಕಂಡು 34,006 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 305 ಅಂಶ ಇಳಿಕೆ ಕಂಡು 10,455 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. 2018ರ ಜನವರಿ 3ರ ನಂತರ ಅತ್ಯಂತ ಕನಿಷ್ಠ ಮಟ್ಟದ ಅಂತ್ಯ ಇದಾಗಿದೆ.

*

ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆಯು ಷೇರುಪೇಟೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

–ಅಜಯ್ ತ್ಯಾಗಿ, ಸೆಬಿ ಅಧ್ಯಕ್ಷ

ಪ್ರತಿಕ್ರಿಯಿಸಿ (+)